ತಲೆಯೊಳಗೆ ಗೆಡ್ಡೆ, ಬಡತನದ ಬೇಗೆ: ಚಿಕಿತ್ಸೆಗೆ ದಾನಿಗಳ ಕರುಣೆಯ ನಿರೀಕ್ಷೆಯಲ್ಲಿ ಗುಲಾಬಿ ಕುಟುಂಬ - Mahanayaka

ತಲೆಯೊಳಗೆ ಗೆಡ್ಡೆ, ಬಡತನದ ಬೇಗೆ: ಚಿಕಿತ್ಸೆಗೆ ದಾನಿಗಳ ಕರುಣೆಯ ನಿರೀಕ್ಷೆಯಲ್ಲಿ ಗುಲಾಬಿ ಕುಟುಂಬ

gulabi.jpg
21/07/2026

ಬಾಳೆಹೊನ್ನೂರು: ತಲೆಯೊಳಗೆ ಬೆಳೆದಿರುವ ಗೆಡ್ಡೆಯ ಶಸ್ತ್ರಚಿಕಿತ್ಸೆಗೆ ಹಣವಿಲ್ಲದೆ, ದುಡಿಯುವ ಕೈಗಳೂ ಇಲ್ಲದೆ ಗಬ್ಗಲ್ ಗ್ರಾಮದ ಬಡ ಕುಟುಂಬವೊಂದು ದಾನಿಗಳಿಂದ ಚಿಕಿತ್ಸಾವೆಚ್ಚದ ನೆರವಿನ ನಿರೀಕ್ಷೆಯಲ್ಲಿದೆ.

ಗಬ್ಗಲ್ ಗ್ರಾಮದ ನಿವಾಸಿ ಗುಲಾಬಿ ಎಂಬುವವರು ಕಳೆದ ಕೆಲವು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮಾತು ತೊದಲುವುದು, ನಡೆಯಲು ಸಾಧ್ಯವಾಗದಿರುವುದು, ಕಿವಿ ಕೇಳಿಸದಿರುವುದು ಹಾಗೂ ದೃಷ್ಟಿ ಮಂಜಾಗುವಂತಹ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಆರಂಭದಲ್ಲಿ ಬಾಳೆಹೊನ್ನೂರು ಹಾಗೂ ಮಾಗುಂಡಿಯ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೂ ರೋಗ ಗುಣಮುಖವಾಗದಿದ್ದಾಗ ಶಿವಮೊಗ್ಗ ಮತ್ತು ಪಡೀಲ್‌ನ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ, ಅವರ ಎಡ ಕಿವಿಯ ಮೇಲ್ಭಾಗದ ತಲೆಯೊಳಗೆ ಗೆಡ್ಡೆ ಇರುವುದು ಪತ್ತೆಯಾಗಿದೆ. ಇದನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಬೇಕಾಗಿದ್ದು, ಸುಮಾರು ₹3 ಲಕ್ಷ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸಂಕಷ್ಟದ ಮೇಲೆ ಸಂಕಷ್ಟ

ಗುಲಾಬಿ ಅವರ ಪತಿ ವರ್ಷದ ಹಿಂದೆಯಷ್ಟೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರಿಗೆ 8ನೇ ತರಗತಿ ಓದುತ್ತಿರುವ ಮಗ ಹಾಗೂ 6ನೇ ತರಗತಿಯಲ್ಲಿ ಓದುತ್ತಿರುವ ಮಗಳಿದ್ದು, ತಾಯಿಯ ಅನಾರೋಗ್ಯದಿಂದ ಮಕ್ಕಳ ಭವಿಷ್ಯವೂ ಕತ್ತಲಲ್ಲಿದೆ. ಪ್ರಸ್ತುತ ಗುಲಾಬಿ ಅವರನ್ನು ಅವರ ತಾಯಿ ಹಾಗೂ ಕುಟುಂಬದವರು ನೋಡಿಕೊಳ್ಳುತ್ತಿದ್ದಾರೆ. ಈಗಾಗಲೇ ಕೈಯಲ್ಲಿದ್ದ ಹಣದ ಜೊತೆಗೆ ಸಾಲ ಮಾಡಿ ಚಿಕಿತ್ಸೆ ಕೊಡಿಸಲಾಗಿದ್ದು, ಮುಂದಿನ ಶಸ್ತ್ರಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣ ಹೊಂದಿಸಲಾಗದೆ ಕುಟುಂಬಸ್ಥರು ಕೈಚೆಲ್ಲಿ ಕುಳಿತಿದ್ದಾರೆ.

ದಾನಿಗಳಲ್ಲಿ ಮನವಿ / ಬ್ಯಾಂಕ್ ಖಾತೆಯ ವಿವರಗಳು

ಗುಲಾಬಿ ಅವರ ಜೀವ ಉಳಿಸಲು ಹಾಗೂ ಅವರ ಎಳೆಯ ಮಕ್ಕಳ ಭವಿಷ್ಯಕ್ಕಾಗಿ ಸಹೃದಯಿ ದಾನಿಗಳು ಧನಸಹಾಯ ನೀಡಬೇಕಾಗಿ ಕುಟುಂಬಸ್ಥರು ವಿನಂತಿಸಿದ್ದಾರೆ.

ಖಾತೆದಾರರ ಹೆಸರು: ಗುಲಾಬಿ (Gulabi)
ಬ್ಯಾಂಕ್: ಕರ್ನಾಟಕ ಬ್ಯಾಂಕ್ (Karnataka Bank)
ಶಾಖೆ: ಬಾಳೆಹೊನ್ನೂರು (Balehonnur Branch)
ಖಾತೆ ಸಂಖ್ಯೆ (Account No): 5382500100803601
ಐಎಫ್‌ಎಸ್‌ಸಿ ಕೋಡ್ (IFSC Code): KARB0000052
ಸಂಪರ್ಕ ಸಂಖ್ಯೆ: 7338628023


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ