ಜೈಪುರ: ಮಗುವಿಗೆ ಜನ್ಮ ನೀಡಿದ್ದ ಅಕ್ಕನ ಆರೈಕೆ ಮಾಡಲು ಹೋಗಿದ್ದ ತಂಗಿಯ ಮೇಲೆ ಭಾವನೇ ಅತ್ಯಾಚಾರ ನಡೆಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಇದೀಗ ಆರೋಪಿ ಭಾವನ ವಿರುದ್ಧ ನಾದಿನಿ ದೂರು ನೀಡಿದ್ದಾಳೆ. ರಾಜಸ್ಥಾನದ ಭಾರತ್ ಪುರದಲ್ಲಿ ಈ ಘಟನೆ ನಡೆದಿದ್ದು, ಇತ್ತೀಚೆಗೆ ಅಕ್ಕನಿಗೆ ಹೆರಿಗೆಯಾಗಿತ್ತು. ಆಕೆಯ ಆರೈಕೆಗಾಗಿ 21 ವರ್ಷ ವಯಸ್ಸ...
ರಾಂಚಿ: ಇದ್ದ ಹಣವನ್ನೆಲ್ಲ ತಾಯಿಯ ಚಿಕಿತ್ಸೆಗಾಗಿಯೇ ಖರ್ಚು ಮಾಡಿದರೂ, ತಾಯಿ ಬದುಕಲಿಲ್ಲ. ಕೊನೆಗೆ ತಾಯಿಯ ಅಂತ್ಯಸಂಸ್ಕಾರ ನಡೆಸಲು ಪುತ್ರನ ಬಳಿ ಬಿಡಿಗಾಸೂ ಇರಲಿಲ್ಲ. ಇದರಿಂದ ಮನನೊಂದ ಆತ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಜಾರ್ಖಂಡ್ ನ ದಿಯೋಘರ್ ಜಿಲ್ಲೆಯ ಜಾಸಿಡಿಹ್ ಪೊಲೀಸ್ ಠಾಣೆ ವ್ಯಾಪ್ತಿಯ...
ಯಾದಗಿರಿ: ಆರ್ ಟಿಒ ಅಧಿಕಾರಿಗಳೆಂದು ನಂಬಿಸಿ ವಾಹನ ಚಾಲಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಹಂದರಕಿ ಕ್ರಾಸ್ ಬಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಗಳನ್ನು ಹಾಕಿ ಆರ್ ಟಿಒ ಅಧಿಕಾರಿಗಳ ಸೋಗಿನಲ್ಲಿಯೇ ವಾಹನಗಳನ್ನು ತಡೆ...
ತಿರುವನಂತಪುರಂ: ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ವ್ಯಕ್ತಿಯೋರ್ವ ಮಹಿಳಾ ಉದ್ಯಮಿಯನ್ನು ಗಾಂಜಾ ಕೇಸ್ ನಲ್ಲಿ ಸಿಲುಕಿಸಿದ ಘಟನೆ ನಡೆದಿದ್ದು, ಇದರ ವಿರುದ್ಧ ಒಂದು ತಿಂಗಳುಗಳ ಕಾಲ ಕಾನೂನು ಹೋರಾಟ ನಡೆಸಿದ ಬಳಿಕ ಮಹಿಳಾ ಉದ್ಯಮಿ ಇದೀಗ ದೋಷಮುಕ್ತರಾಗಿದ್ದಾರೆ. ಕೈಮಗ್ಗದ ಅಂಗಡಿ ವೀವರ್ ವಿಲ್ಲಾ ಮಾಲಕಿ ಶೋಭಾ ವಿಶ್ವನಾಥನ್ ಅವರ ಕ...
ಹುಬ್ಬಳ್ಳಿ: ಕೊರೊನಾ ಎರಡನೇ ಅಲೆಯ ಬೆನ್ನಲ್ಲೇ ಜನರಿಗೆ ಮತ್ತೊಂದು ಶಾಕ್ ನೀಡಿದ್ದ ಬ್ಲ್ಯಾಕ್ ಫಂಗಸ್ ಹುಬ್ಬಳ್ಳಿಯಲ್ಲಿ 10 ಮಂದಿಯ ದೃಷ್ಟಿಯನ್ನು ಸಂಪೂರ್ಣವಾಗಿ ಕಿತ್ತುಕೊಂಡಿದೆ. ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಂಡು ಬಂದ ಈ ಬ್ಲ್ಯಾಕ್ ಫಂಗಸ್ ನಿಂದಾಗಿ ಹುಬ್ಬಳ್ಳಿಯ ಕಿಮ್ಸ್ ನಲ್ಲಿ 46 ಜನರಿಗೆ ದೃಷ್ಟಿ ದೋಷ ಕಂಡು ಬಂದಿತ್ತು. ...
ನವದೆಹಲಿ: ಜಮ್ಮುವಿನ ವಾಯುಸೇನಾ ನೆಲೆಯ ಮೇಲೆ ದಾಳಿ ನಡೆದಿದ್ದು, ಸ್ಫೋಟಗಳಿಗೆ ಡ್ರೋಣ್ ಗಳನ್ನು ಬಳಸಿರಬಹುದು ಎಂಬ ಶಂಕೆ ಪ್ರಾಥಮಿಕ ತನಿಖೆಯಿಂದ ವ್ಯಕ್ತವಾಗಿದೆ ಎಂದು ವರದಿಯಾಗಿದೆ. ಭಾರತೀಯ ವಾಯುಸೇನೆಗೆ ಸೇರಿದ ನಾಗರಿಕ ವಿಮಾನ ನಿಲ್ದಾಣದ ರನ್ ವೇ ಮತ್ತು ವಾಯುಸಂಚಾರ ನಿಯಂತ್ರಣ ಕೊಠಡಿಯ ಮೇಲೆ ದಾಳಿ ನಡೆಸಲು ಇದೇ ಮೊದಲ ಭಾರಿಗೆ ಡ್ರೋಣ್ ...
ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆಗೆ ನಾಳೆ ದಿನಾಂಕ ಪ್ರಕಟವಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದ್ದು, ಈ ಬಗ್ಗೆ ನಾಳೆ ನಡೆಯುವ ಸಭೆಯಲ್ಲಿ ಶಿಕ್ಷಣ ಸಚಿವರು ದಿನಾಂಕ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ನೇತೃತ್ವದಲ್ಲಿ ನಾಳೆ ಮಹತ್ವದ ಸಭೆ ನಡೆಯಲಿದ್ದು, ಸಭೆಯಲ್ಲಿ ...
ಪುತ್ತೂರು: ಅತ್ಯಾಚಾರ ನಡೆಸಿ ಪೊಲೀಸರ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಯೋರ್ವ ಇದೀಗ ಅಪಘಾತಕ್ಕೀಡಾಗಿ ತಾನಾಗಿಯೇ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಸಜೀಪಮನ್ನೂರು ಗ್ರಾಮದ ಆಲಾಡಿ ನಿವಾಸಿ ಪುರುಷೋತ್ತಮ ಎಂಬಾತ ತನ್ನ ಪತ್ನಿಯ ಅಕ್ಕನ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದು, ಅತ್ಯಾಚಾರದ...
ಲಕ್ನೋ: ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿ(ಬಿಎಸ್ ಪಿ) ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷದ ಜೊತೆಗೆ ಬಿಎಸ್ ಪಿ ಮೈತ್ರಿ ಮಾಡಿಕೊಳ್ಳಲಿದೆ ...
ಈರೋಡ್: ಆರೋಗ್ಯ ಕಾರ್ಯಕರ್ತನೆನ್ನಲಾಗಿದ್ದ ವ್ಯಕ್ತಿ ನೀಡಿದ ಮಾತ್ರೆಗಳನ್ನು ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟು, ಅವರ ಪತಿ ಹಾಗೂ ಮತ್ತಿಬ್ಬರು ಅಸ್ವಸ್ಥರಾಗಿರುವ ಘಟನೆ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ನಡೆದಿದೆ. ಈರೋಡ್ ಜಿಲ್ಲೆಯ ಕರುಗೌಂದನ್ ವಲಸು ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ನಿವಾಸಿ ರೈತ ಕರುಪಣ್ಣನ್ ಅವರ ಮನೆಗೆ...