ಜಗತ್ತಿನ ಯಾವುದೇ ಮೂಲೆಯಲ್ಲಿ ಒಂದು ನೋವಿನ ಧ್ವನಿ ಕೇಳಿಬಂದರೂ ಸಾಂತ್ವನ ಹೇಳುವ ಮನಸ್ಥಿತಿ ಇದ್ದರೆ ಮಾತ್ರ ನಾವು ನಾಗರಿಕ ಜಗತ್ತಿನ ಮನುಷ್ಯರು ಎಂದು ಎದೆ ಮುಟ್ಟಿ ಹೇಳಿಕೊಳ್ಳಲು ಸಾಧ್ಯ. ಹಾಗೆಯೇ ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ದೌರ್ಜನ್ಯ ಮತ್ತು ಅನ್ಯಾಯದ ವಿರುದ್ಧ ದನಿ ಎತ್ತುವ ಮನಸ್ಥಿತಿ ಇದ್ದರೆ ಮಾತ್ರ ನಮ್ಮಲ್ಲಿ ಮನುಷ್ಯತ್ವ ಇದೆ...