ಕಾರ್ಕಳ: ಹಾಡಹಗಲೇ ಮನೆಯೊಂದರ ಬಾಗಿಲು ಮುರಿದು ನುಗ್ಗಿದ ಕಳ್ಳರು ಮನೆಯನ್ನು ಜಾಲಾಡಿದ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಸಮೀಪದ ಕಳತ್ರಪಾದೆ ಬಳಿ ನಡೆದಿದೆ. ಗೋಪಾಲ ಪಾಂಡಿಬೆಟ್ಟ ಎಂಬವರ ಮನೆಯ ಬಾಗಿಲು ಮುರಿದು ನುಗ್ಗಿದ ಕಳ್ಳರು, ಕಳವು ಮಾಡಲು ಮನೆಯಲ್ಲಿ ಚಿನ್ನಾಭರಣ, ಹಣಕ್ಕಾಗಿ ಜಾಲಾಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರ...
2022-23ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿ ಹಂಚಿಕೆಯಾದ 29,165.81 ಕೋಟಿ ರೂ.ಗಳ ಅನುದಾನದಲ್ಲಿ ಇದೂವರೆಗೆ (ಅಕ್ಟೋಬರ್ ಅಂತ್ಯ) 9,936 ಕೋಟಿ ರೂ.ಗಳು (ಶೇಕಡಾ 34% ರಷ್ಟು )ವೆಚ್ಚವಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂ...
ದಕ್ಷಿಣ ಕನ್ನಡ: ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಬೈತಡ್ಕ ಎಂಬಲ್ಲಿ ವೃದ್ಧ ಮಹಿಳೆಯೊಬ್ಬರು ಒಬ್ಬಂಟಿಯಾಗಿ ಮನೆಯಲ್ಲಿ ಇದ್ದ ಸಂದರ್ಭ ಅವರ ಕುತ್ತಿಗೆಯಿಂದ ಚಿನ್ನದ ಸರ ದರೋಡೆ ಪ್ರಕರಣ ನಡೆದಿತ್ತು. ಈ ಕೇಸ್ ಆರೋಪಿತ ಸಲೀಂ ಪಿ.ಎ. (34) ಎಂಬಾತನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 28ರಂದು ಬೆಳಿಗ್ಗೆ 10:30ಕ್ಕ...
ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದಲ್ಲಿ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟಕ್ಕೆ ಹಾಕಲಾಗಿದ್ದ ಬ್ಯಾನರ್ ಹರಿದು ದುಷ್ಕರ್ಮಿಗಳ ಗುಂಪೊಂದು ವಿಕೃತಿ ಮೆರೆದಿದೆ. ಗ್ರಾಮದ ಪೊಸರಡ್ಕ ಗರಡಿ ವಠಾರದಲ್ಲಿ ಬುಧವಾರದಂದು ನಡೆದಿದ್ದ ಯಕ್ಷಗಾನ ಬಯಲಾಟಕ್ಕೆ ಶುಭ ಕೋರಲು ಅನೇಕ ಬ್ಯಾನರ್ಗಳನ್ನು ಅಳವಡಿಸಲಾಗಿತ್ತು. ಆದರೆ ಏಕ ಏಕಿ ...
ಬೆಳ್ತಂಗಡಿ : ಚಲನಚಿತ್ರ ಧಾರವಾಹಿಗಳಲ್ಲಿ ನಟಿಸಿದ್ದ ಕಲಾವಿದ ಹಾಗೂ ಕೃಷಿಕರಾಗಿರುವ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ದಂಪದಡ್ಕ ನಿವಾಸಿ ರಘುರಾಮ್ ಶೆಟ್ಟಿ(58) ಡಿ.2 ರಂದು ರಾತ್ರಿ ಮನೆಯಲ್ಲಿ ಹೃದಯಾಘಾತವಾಗಿದ್ದು, ತಕ್ಷಣ ಮನೆಮಂದಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ವೈದ್ಯರು ಪರೀಕ್ಷಿಸಿದಾಗ ಹೃದಯಾಘಾತದಿಂದ ಸಾ...
ಲಂಡನ್: ನಾನೂ ಜನಾಂಗೀಯ ತಾರತಮ್ಯ ಅನುಭವಿಸಿದ್ದೆ. ಆದರೆ ಇಂಥ ಸಮಸ್ಯೆಯನ್ನು ಎದುರಿಸಲು ಅಗತ್ಯವಿರುವ ಅಸಾಧಾರಣ ಪ್ರಗತಿಯನ್ನು ದೇಶವು ಸಾಧಿಸಿದೆ' ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. 'ನಾನು ಚಿಕ್ಕವನಾಗಿದ್ದಾಗ ಬ್ರಿಟನ್ ನಲ್ಲಿ ಜನಾಂಗೀಯ ತಾರತಮ್ಯ ಅನುಭವಿಸಿದ್ದೆ. ಆದರೆ ಈಗ ಅಂತಹ ಸಮಸ್ಯೆ ಇದೆ ಎಂದು ನಾನು ಭಾವಿಸುವುದಿಲ...
ಉಡುಪಿ: ನನ್ನ ಅಭಿಮಾನಿಗಳು ಮತ್ತೇ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಉಡುಪಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಪಕ್ಷ ಬಯಸಿದರೇ ರಾಜ್ಯ ಹಿಂ.ವ.ಗಳ ಆಯೋಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂದಿನ ವಿಧಾನಸಭಾ ...
ಚಾಮರಾಜನಗರ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಇದೇ 12ರಂದು ಚಾಮರಾಜನಗರಕ್ಕೆ ಭೇಟಿ ನೀಡಲಿದ್ದು ಈ ಸಂಬಂಧ ಸಿಎಂ ಅವರ ವಿಶೇಷ ಕರ್ತವ್ಯಾಧಿಕಾರಿಯಿಂದ ಜಿಲ್ಲಾಧಿಕಾರಿಗೆ ಪತ್ರ ಬಂದಿದೆ. ಬೆಳಗ್ಗೆ 10:30ಕ್ಕೆ ಚಾಮರಾಜನಗರಕ್ಕೆ ಬರಲಿದ್ದು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮಾಡಲಿದ್ದು ಬಳಿಕ ಮಧ್ಯಾಹ್ನ 1ಕ್ಕೆ ಹನ...
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಸಾಕಾನೆ ಶಿಬಿರದಿಂದ 4 ಸಾಕಾನೆಗಳನ್ನು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರ ಆದೇಶದ ಮೇರೆಗೆ ಮಧ್ಯಪ್ರದೇಶಕ್ಕೆ ಹಸ್ತಾಂತರಿಸಲಾಗಿದೆ. ರಾಂಪುರ ಸಾಕಾನೆ ಶಿಬಿರದ ಕೃಷ್ಣ, ಗಜ, ಮರ್ಷಿಹ ಮತ್ತು ಪೂಜಾ ಎಂಬ 4 ಆ...
ದಲಿತ ಹಾಗೂ ಬುಡಕಟ್ಟು ಜನಾಂಗಕ್ಕೆ ಉದ್ಯೋಗ ನೀಡಬೇಕಾಗುತ್ತದೆ ಅನ್ನೋ ಕಾರಣಕ್ಕೆ ಗುಜರಾತ್ ನಲ್ಲಿ ಬಿಜೆಪಿ ಸರ್ಕಾರವು 5 ಲಕ್ಷ ಹುದ್ದೆಗಳನ್ನು ಇನ್ನೂ ಭರ್ತಿ ಮಾಡಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಎಸ್ ಟಿ ಮೀಸಲು ವಿಧಾನಸಭಾ ಕ್ಷೇತ್ರವಾದ ಭಿಲೋಡಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರ...