ಆತ್ಮನಿರ್ಭರ ಭಾರತ ಹೊಸ ಆರ್ಥಿಕ ದಿಸೆಯಲ್ಲಿ ಸಾಗುತ್ತಿರುವ ಸಂದರ್ಭದಲ್ಲೇ ಭಾರತದ ದುಡಿಯುವ ವರ್ಗಗಳು ಹಂತಹಂತವಾಗಿ ಶಿಥಿಲವಾಗುತ್ತಿರುವ ತಮ್ಮ ಸುಭದ್ರ ನೆಲೆಗಳ ಭವಿಷ್ಯದ ಬಗ್ಗೆ ಆತಂಕಗಳನ್ನು ಹೊತ್ತು ಮತ್ತೊಂದು ಮೇ ದಿನವನ್ನು ಆಚರಿಸುತ್ತಿವೆ. 135 ವರ್ಷಗಳ ಇತಿಹಾಸ ಇರುವ ಮೇ ದಿನಾಚರಣೆಗೆ ಈ ಸಂದರ್ಭದಲ್ಲಿ ಒಂದು ಹೊಸ ಆಯಾಮವನ್ನು ನೀಡುವ ಅನಿವ...