ಮಂಗಳೂರು: ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಎನ್ ಐಎಗೆ ಅಧಿಕಾರಿಗಳಿಗೆ ಇಂದು ಅಧಿಕೃತವಾಗಿ ಹಸ್ತಾಂತರ ಮಾಡಿದರು. ಖುದ್ದು ಪೊಲೀಸ್ ಕಮಿಷನರ್ ನೇತೃತ್ವದಲ್ಲೇ ಆರೋಪಿ ಶಾರಿಕ್ ಹೇಳಿಕೆಯನ್ನು ಅಧಿಕಾರಿಗಳು ದಾಖಲಿಸಿಕೊಂಡರು. ಇಂದಿನಿಂದ ಎನ್ ಐಎ ಅಧಿಕಾರಿಗಳು ಆರೋಪಿ ಶಾರ...