ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಎನ್ ಐಎಗೆ ಅಧಿಕೃತವಾಗಿ ಹಸ್ತಾಂತರ | ಶಾರೀಕ್ ನಿಂದ ಹೇಳಿಕೆ ಪಡೆದ ಪೊಲೀಸರು
ಮಂಗಳೂರು: ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಎನ್ ಐಎಗೆ ಅಧಿಕಾರಿಗಳಿಗೆ ಇಂದು ಅಧಿಕೃತವಾಗಿ ಹಸ್ತಾಂತರ ಮಾಡಿದರು.
ಖುದ್ದು ಪೊಲೀಸ್ ಕಮಿಷನರ್ ನೇತೃತ್ವದಲ್ಲೇ ಆರೋಪಿ ಶಾರಿಕ್ ಹೇಳಿಕೆಯನ್ನು ಅಧಿಕಾರಿಗಳು ದಾಖಲಿಸಿಕೊಂಡರು. ಇಂದಿನಿಂದ ಎನ್ ಐಎ ಅಧಿಕಾರಿಗಳು ಆರೋಪಿ ಶಾರೀಕ್ ನಿಂದ ಪ್ರತ್ಯೇಕ ಹೇಳಿಕೆ ಪಡೆಯಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಪ್ರಕರಣ ಸಂಬಂಧ ಮಂಗಳೂರಿನಲ್ಲಿ ಹೇಳಿಕೆ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ಡಿ.ಜಿ ಕಚೇರಿ ಸೂಚನೆಯಂತೆ ಪ್ರಕರಣವನ್ನು ಎನ್ ಐ ಎಗೆ ವಹಿಸಲಾಗಿದೆ. ಇಂದು ಪ್ರಕರಣವನ್ನು ಎನ್ ಐ ಎ ಗೆ ಪ್ರಕರಣವನ್ನು ಹಸ್ತಾಂತರಿಸುತ್ತಿದ್ದೇವೆ ಎಂದು ತಿಳಿಸಿದರು.
ನಿನ್ನೆ ಶಾರೀಕ್ ನನ್ನು ಕೆಲ ಕಾಲ ವಿಚಾರಣೆ ಮಾಡಿದ್ದೇವೆ. ಹಲವು ಪ್ರಶ್ನೆಗಳನ್ನು ಶಾರೀಕ್ ಗೆ ಕೇಳಿದ್ದೇವೆ ಎಂದು ಅವರು ಇದೇ ವೇಳೆ ತಿಳಿಸಿದರು.
ನಿನ್ನೆ ವೈದ್ಯರು ಶಾರೀಕ್ ಫಿಟ್ ಇದ್ದಾನೆ,ಪ್ರಶ್ನೆ ಮಾಡಬಹುದು ಅಂತಾ ಹೇಳಿದ್ದರು. ನಮ್ಮ ಪ್ರಶ್ನೆಗಳಿಗೆ ಶಾರೀಕ್ ಉತ್ತರ ನೀಡಿದ್ದಾನೆ. ಈ ಪ್ರಕರಣದ ತನಿಖೆಯನ್ನು ಇನ್ನು ಎನ್ ಐ ಎ ಅಧಿಕಾರಿಗಳು ನಡೆಸಲಿದ್ದಾರೆ. ಎನ್ ಐ ಎ ಅಧಿಕಾರಿಗಳಿಗೆ ಆಯ್ದ ಅಧಿಕಾರಿ, ಸಿಬ್ಬಂದಿ ಯನ್ನು ತನಿಖೆಗೆ ನೀಡಲಿದ್ದೇವೆ ಎಂದರು.
ಶಾರೀಕ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಅವರು, ಈಗಲೇ ಹೇಳಲು ಸಾಧ್ಯವಿಲ್ಲ. ಸುಟ್ಟ ಗಾಯ ಆಗಿರೋದರಿಂದ ಆರೋಗ್ಯ ಸೂಕ್ಷ್ಮ ವಾಗಿರುತ್ತದೆ. ಶಾರೀಕ್ ಗೆ ಶೇ.40ರಷ್ಟು ಸುಟ್ಟ ಗಾಯವಾಗಿದೆ ಎಂದು ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka