ಮ್ಯಾರಾಥಾನ್ ನಲ್ಲಿ ಭಾಗವಹಿಸಿದ್ರು ದಂತ ವೈದ್ಯ: ಕುಸಿದು ಬಿದ್ದು ದುರ್ಮರಣ
ಗೋವಾ ಮ್ಯಾರಾಥಾನ್ ನಲ್ಲಿ ಭಾಗವಹಿಸಿದ ಗಂಟೆಯೊಳಗೆ ಯುವ ದಂತ ವೈದ್ಯರೊಬ್ಬರು ಕುಸಿದು ಬಿದ್ದು ಸಾವಿಗೀಡಾದ ಘಟನೆ ನಡೆದಿದೆ. ದಕ್ಷಿಣ ಗೋವಾದ ಒಂದು ಪ್ರದೇಶದಲ್ಲಿ ವರ್ಷವಿಡಿ ನಡೆಯುವ ಮ್ಯಾರಾಥಾನ್ ನಲ್ಲಿ ಭಾಗವಹಿಸಿದ ಬಳಿಕ ಡಾಕ್ಟರ್ ಮಿಥುನ್ ಗುಡಾಲ್ ಅವರು ಧಾರುಣವಾಗಿ ಮೃತಪಟ್ಟಿದ್ದಾರೆ. ಮಗ ಶಾರೀರಿಕವಾಗಿ ಸಂಪೂರ್ಣವಾಗಿ ಫಿಟ್ ಆಗಿದ್ದ ಮತ್ತು ಪ್ರತಿದಿನ ವ್ಯಾಯಾಮದೊಂದಿಗೆ ತನ್ನ ದಿನವನ್ನು ಆರಂಭಿಸುತ್ತಿದ್ದ ಎಂದು ಡಾಕ್ಟರ್ ಮಿಥುನ್ ಅವರ ತಂದೆ ಹೇಳಿದ್ದಾರೆ.
ಇವರು ಕುಸಿದು ಬಿದ್ದ ಕೂಡಲೇ ಅವರಿಗೆ ಸಿಪಿಆರ್ ನೀಡಲಾಗಿದೆ. ಆದರೆ ಅವರು ಅದಕ್ಕೆ ಸ್ಪಂದಿಸಲಿಲ್ಲ ಎಂದು ತಂದೆ ಹೇಳಿದ್ದಾರೆ.
ತನಗೆ ಏನೋ ಆಗುತ್ತಿದೆ ಮತ್ತು ವಿಶ್ರಾಂತಿ ಬೇಕು ಎಂದು ಮಗ ಹೇಳಿದ. ಸುಮಾರು ಒಂದು ಗಂಟೆಗಳ ಕಾಲ ವಿಶ್ರಾಮವನ್ನು ಪಡಕೊಂಡ. ಆ ಬಳಿಕ ವಾಂತಿ ಮಾಡಲಾರಂಭಿಸಿದ ಮತ್ತು ಕುಸಿದು ಬಿದ್ದ. ನಮ್ಮ ಕುಟುಂಬದಲ್ಲಿ ನಾವೆಲ್ಲರೂ ವೈದ್ಯರಾಗಿದ್ದೇವೆ. ಆದ್ದರಿಂದ ನಾವು ಸಿಪಿಆರ್ ನೀಡಲು ಯತ್ನಿಸಿದೆವು ಆದರೆ ಮಗ ಅದಕ್ಕೆ ಸ್ಪಂದಿಸಲಿಲ್ಲ ಎಂದು ತಂದೆ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj