ಕೊನೆಗೂ ಸ್ಥಗಿತವಾಯ್ತು ಟೋಲ್‌ ಗೇಟ್ ಶುಲ್ಕ: ಇಂದಿನಿಂದ ಸುರತ್ಕಲ್‌ ಟೋಲ್ ಸಂಚಾರ ಸರಾಗ - Mahanayaka

ಕೊನೆಗೂ ಸ್ಥಗಿತವಾಯ್ತು ಟೋಲ್‌ ಗೇಟ್ ಶುಲ್ಕ: ಇಂದಿನಿಂದ ಸುರತ್ಕಲ್‌ ಟೋಲ್ ಸಂಚಾರ ಸರಾಗ

surathkal tollgeat
01/12/2022

ಟೋಲ್‌ಗೇಟ್‌ ವಿರೋಧಿ ಹೋರಾಟಗಾರರ ಶ್ರಮಕ್ಕೆ ಕೊನೆಗೂ ಫಲ ಸಿಕ್ಕಿದ್ದು, ಡಿಸೆಂಬರ್‌ 1ರಿಂದ ಸುರತ್ಕಲ್ ಎನ್ ಐಟಿಕೆ ಟೋಲ್‌ಗೇಟ್‌ ಶುಲ್ಕವಸೂಲಿ ಇಂದಿನಿಂದ ಸ್ಥಗಿತಗೊಂಡಿದೆ. ಇಂದು ಬೆಳಿಗ್ಗಿನಿಂದಲೇ ಎಲ್ಲಾ ವಾಹನಗಳು ಯಾವುದೇ ಅಡೆ ತಡೆ ಇಲ್ಲದೇ ಸರಾಗವಾಗಿ ಸಂಚರಿಸುತ್ತಿವೆ.

ಇಂದು ಸುರತ್ಕಲ್‌ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಜೆ 4 ಗಂಟೆಗೆ 35 ದಿನಗಳ ಹಗಲು ರಾತ್ರಿ ಧರಣಿ ಸಮಾರೋಪದ ಸಂಭ್ರಮವನ್ನು ಆಚರಿಸಲಿದೆ. ಇನ್ನು ನವಯುಗ್‌ ಕಂಪೆನಿ ಆಡಳಿತದ ಹೆಜಮಾಡಿ ಟೋಲ್‌ ಪ್ಲಾಜಾದಲ್ಲಿ ಡಿಸೆಂಬರ್ 1ರಿಂದ ಅಧಿಕ ದರ ಪಡೆಯುವ ನಿರ್ಧಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ.

ಹೆಜಮಾಡಿ ಟೋಲ್ ನೊಂದಿಗೆ ಎನ್‌ ಐಟಿಕೆ ಟೋಲ್ ವಿಲೀನಗೊಳಿಸಿ ಡಿಸೆಂಬರ್ 1ರಿಂದ ಎರಡೂ ಟೋಲ್‌ ಗಳ ದರವನ್ನು ಹೆಜಮಾಡಿ ಟೋಲ್ ‌ನಲ್ಲಿ ಪಡೆಯಲು ಸರಕಾರ ಆದೇಶಿಸಿತ್ತು. ಆದರೆ ನವಯುಗ ಕಂಪೆನಿಯ ಆಡಳಿತ ಮಂಡಳಿ ಸರಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಹಲವು ಸುತ್ತಿನ ಮಾತುಕತೆಗಳ ಬಳಿಕವೂ ದುಪ್ಪಟ್ಟು ದರ ವಸೂಲಾತಿಗೆ ನಿರಾಕರಿಸಲಾಗಿದೆ.

ಹಾಗಾಗಿ ವಾರದ ಮಟ್ಟಿಗೆ ಹೆಜಮಾಡಿಯಲ್ಲಿ ಅಧಿಕ ದರ ಪಡೆಯದೇ ಯಥಾಸ್ಥಿತಿ ಕಾಪಾಡಲು ನಿರ್ಧರಿಸಲಾಗಿದೆ. ಈ ನಡುವೆ ನವಯುಗ್ ಟೋಲ್ ಪ್ಲಾಜಾ ಆಡಳಿತ ಮಂಡಳಿ ಅಧಿಕ ದರ ಪಡೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ನವಯುಗ್‌ ಆಡಳಿತ ಮಂಡಳಿಯನ್ನು ತುರ್ತಾಗಿ ದಿಲ್ಲಿಗೆ ಬರುವಂತೆ ತಿಳಿಸಿದ್ದು, ಇಂದು ಅಥವಾ ನಾಳೆ ಸಭೆ ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ