ಲಿಮರಿಕ್: ಮನುಷ್ಯ ಎದುರಿಸುವ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಒಬ್ಬೊಬ್ಬರಿಗೆ ಒಂದೊಂದು ಅನಾರೋಗ್ಯ ಸಮಸ್ಯೆಗಳು ಹಿಂಸೆಯಾಗಿರುತ್ತದೆ. ಹಾಗಾಗಿಯೇ ತಿಳಿದವರು ಆರೋಗ್ಯವೇ ಭಾಗ್ಯ ಎಂದು ಹೇಳಿರೋದು. ಹೌದು..! ಇಲ್ಲೊಬ್ಬರು 66 ವರ್ಷ ವಯಸ್ಸಿನ ವೃದ್ಧ ತನ್ನ ವಿವಾಹ ವಾರ್ಷಿಕೋತ್ಸವದಂದೇ ತನ್ನ ನೆಮ್ಮದಿ ಕಳೆದುಕೊಂಡ ಘಟನೆ ನಡೆದಿದ್ದು, ತನ್ನ ಹ...