ಲೈಂಗಿಕ ಕ್ರಿಯೆಯ ಬಳಿಕ ನೆನಪಿನ ಶಕ್ತಿ ಕಳೆದುಕೊಂಡ ವೃದ್ಧ! - Mahanayaka

ಲೈಂಗಿಕ ಕ್ರಿಯೆಯ ಬಳಿಕ ನೆನಪಿನ ಶಕ್ತಿ ಕಳೆದುಕೊಂಡ ವೃದ್ಧ!

night
30/05/2022

ಲಿಮರಿಕ್: ಮನುಷ್ಯ ಎದುರಿಸುವ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಒಬ್ಬೊಬ್ಬರಿಗೆ ಒಂದೊಂದು  ಅನಾರೋಗ್ಯ ಸಮಸ್ಯೆಗಳು ಹಿಂಸೆಯಾಗಿರುತ್ತದೆ. ಹಾಗಾಗಿಯೇ ತಿಳಿದವರು ಆರೋಗ್ಯವೇ ಭಾಗ್ಯ ಎಂದು ಹೇಳಿರೋದು.

ಹೌದು..! ಇಲ್ಲೊಬ್ಬರು 66 ವರ್ಷ ವಯಸ್ಸಿನ ವೃದ್ಧ ತನ್ನ ವಿವಾಹ ವಾರ್ಷಿಕೋತ್ಸವದಂದೇ ತನ್ನ ನೆಮ್ಮದಿ ಕಳೆದುಕೊಂಡ ಘಟನೆ ನಡೆದಿದ್ದು, ತನ್ನ ಹಳೆಯ ನೆನಪುಗಳನ್ನೆಲ್ಲ ಕಳೆದುಕೊಂಡು ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದಾರೆ.

ಐರ್ಲೆಂಡ್ ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 66 ವರ್ಷದ ವ್ಯಕ್ತಿಯೊಬ್ಬರು ತನ್ನ ವಿವಾಹ ವಾರ್ಷಿಕೋತ್ಸವವನ್ನು ಕುಟುಂಬಸ್ಥರ ಜೊತೆಗೆ ಅದ್ದೂರಿಯಿಂದ ಆಚರಿಸಿಕೊಂಡಿದ್ದರು. ಆ ದಿನ ರಾತ್ರಿ ಅವರು ತಮ್ಮ ಪತ್ನಿಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು.  ಇದಾಗಿ ಬೆಳಗಾಗುತ್ತಿದಂತೆಯೇ ಅವರು ತಮ್ಮ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಾರೆ.

ರಾತ್ರಿ ಇಡೀ ಚೆನ್ನಾಗಿದ್ದ ವೃದ್ಧ ಬೆಳಗ್ಗೆದ್ದು, ನಿನ್ನೆ ಏನಾಗಿತ್ತು? ಎಂದು ಮನೆಯವರನ್ನು ಪ್ರಶ್ನಿಸಿದ್ದಾರೆ. ಇದಲ್ಲದೇ ತನಗೆ ಏನೂ ನೆನಪಿಲ್ಲದವರಂತೆ ವರ್ತಿಸಿದ್ದಾರೆ.  ಇದರಿಂದ ಗಾಬರಿಗೊಂಡ ಮನೆಯವರು ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ರೋಗ ಅಲ್ಪಾವಧಿ ಮರೆಗುಳಿ ಸಮಸ್ಯೆ. ಇದನ್ನು ಟ್ರಾನ್ಸಿಯೆಂಟ್ ಗ್ಲೋಬಲ್ ಅಮ್ನೆಶಿಯಾ ಎನ್ನುತ್ತಾರೆ. 50ರಿಂದ 70 ವರ್ಷದ ವ್ಯಕ್ತಿಗಳಲ್ಲಿ ಇದು ಕಂಡುಬರುತ್ತದೆ. ಈ ಸಮಸ್ಯೆಗೆ ತುತ್ತಾದ ವ್ಯಕ್ತಿಗಳು ಒಂದು ವರ್ಷದ ಹಿಂದಿನ ಘಟನೆಗಳನ್ನೆಲ್ಲಾ ಮರೆಯುತ್ತಾರೆ. ಅದೃಷ್ಟವಶಾತ್ ಹಾಗೆ ಹೋದ ನೆನಪಿನ ಶಕ್ತಿ ಕೆಲವೇ ಗಂಟೆಗಳಲ್ಲಿ ಮರಳುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಯನ್ನು ಕೇಳಿ ಸಾಕಷ್ಟು ಜನರು ಆಶ್ಚರ್ಯ ಚಕಿತರಾಗಿದ್ದಾರೆ.

ಇನ್ನೂ . 50ರಿಂದ 70 ವರ್ಷದ ವ್ಯಕ್ತಿಗಳಲ್ಲಿ ಈ ರೋಗವು ದೈಹಿಕ ಚಟುವಟಿಕೆ, ಬಿಸಿ ಅಥವಾ ತಣ್ಣೀರಿನಲ್ಲಿ ಮುಳುಗಿದಾಗ, ಭಾವೋದ್ವೇಗದ ಒತ್ತಡ, ನೋವು ಹಾಗೂ ಲೈಂಗಿಕ ಕ್ರಿಯೆ ವೇಳೆ ಬರಬಹುದು ಎಂದು ವೈದ್ಯರು ಹೇಳುತ್ತಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೊಮ್ಮಾಯಿಯವರೇ ನೆನಪಿರಲಿ,  ಮಸಿ ಬಳಿದದ್ದು ರಾಜ್ಯ ಸರ್ಕಾರದ ಮುಖಕ್ಕೆ: ಸಿದ್ದರಾಮಯ್ಯ ಕಿಡಿ

ನೆಟ್‌ಫ್ಲಿಕ್ಸ್ ರಷ್ಯಾದಲ್ಲಿ ಪ್ರಸಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ

ನವಜಾತ ಶಿಶುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ!: ವೈದ್ಯರಿಗೇ ಶಾಕ್

ರಣರಂಗವಾದ ರೈತ ಮುಖಂಡರ ಸಭೆ: ರೈತ ಮುಖಂಡ ಟಿಕಾಯತ್ ಮೇಲೆ ಹಲ್ಲೆ, ಮಸಿ ಎರಚಿದ ಕಿಡಿಗೇಡಿ

ಇತ್ತೀಚಿನ ಸುದ್ದಿ