ನವಜಾತ ಶಿಶುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ!: ವೈದ್ಯರಿಗೇ ಶಾಕ್ - Mahanayaka

ನವಜಾತ ಶಿಶುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ!: ವೈದ್ಯರಿಗೇ ಶಾಕ್

babye
30/05/2022

ಬಿಹಾರ: ಬಿಹಾರದ ಮೋತಿಹಾರಿಯಲ್ಲಿ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣ ಪತ್ತೆಯಾಗಿದೆ.

ಮಗುವಿಗೆ ಹೊಟ್ಟೆ ಉಬ್ಬರಿಸಿದ್ದರಿಂದ ಮಗುವಿಗೆ ಸರಿಯಾಗಿ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪೋಷಕರು 40 ದಿನದ ಮಗುವನ್ನು ಮೋತಿಹಾರಿಯ ರಹಮಾನಿಯಾ ವೈದ್ಯಕೀಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆತರಲಾಗಿತ್ತು.

ಹೊಟ್ಟೆಯ ಉಬ್ಬುವಿಕೆ ಮತ್ತು ಮೂತ್ರ ಸರಿಯಾಗಿ ಹೋಗದ ಕಾರಣ ರಹ್ಮಾನಿಯಾ ವೈದ್ಯಕೀಯ ಕೇಂದ್ರದ ಡಾ. ತಬ್ರೇಜ್ ಅಜೀಜ್ ರೋಗಿಗೆ ಕಂಪ್ಯೂಟೆಡ್ ಟೊಮೊಗ್ರಫಿ (CT) ಸ್ಕ್ಯಾನ್ ಅನ್ನು ಮಾಡಿಸಲು ಸೂಚಿಸಿದ್ದರು. ಅದರಂತೆ ಪರೀಕ್ಷೆ ಮಾಡಿ ವರದಿ ಬಂದಾಗ, ಶಿಶುವಿನ ಹೊಟ್ಟೆಯೊಳಗೆ ಭ್ರೂಣ ಬೆಳವಣಿಗೆಯಾಗಿರುವುದನ್ನು ಕಂಡು ವೈದ್ಯರು ಆಘಾತಕ್ಕೊಳಗಾಗಿದ್ದಾರೆ.

40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣವು ಬೆಳವಣಿಗೆಯಾಗುತ್ತಿರುವುದು  ಐದು ಲಕ್ಷ ರೋಗಿಗಳಲ್ಲಿ ಒಬ್ಬರಿಗೆ ಮಾತ್ರ ಸಂಭವಿಸುವ ಅಪರೂಪದ ಪ್ರಕರಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಇದನ್ನು ಭ್ರೂಣದಲ್ಲಿ ಭ್ರೂಣ ಎಂದು ಕರೆಯಲಾಗುತ್ತದೆ. ಶಿಶುವು ಶಸ್ತ್ರಚಿಕಿತ್ಸೆಗೆ ಒಳಗಾಗಿದೆ, ಈವಾಗ ಅರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಡಾ.ಅಜೀಜ್ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಣರಂಗವಾದ ರೈತ ಮುಖಂಡರ ಸಭೆ: ರೈತ ಮುಖಂಡ ಟಿಕಾಯತ್ ಮೇಲೆ ಹಲ್ಲೆ, ಮಸಿ ಎರಚಿದ ಕಿಡಿಗೇಡಿ

ಮಂಗಳೂರಿನ ಬೀಚ್ ನಲ್ಲಿ ನೀರುಪಾಲಾಗಿ ಮೈಸೂರಿನ ಇಬ್ಬರು ಸಾವು

ಬದಾಮ್  ಸೇವನೆ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಉತ್ತಮ

ಟ್ಯೂಮೋಕ್‌ ಆ್ಯಪ್‌ ಮೂಲಕ ಜೂನ್‌ ತಿಂಗಳ ಬಿಎಂಟಿಸಿ ಮಾಸಿಕ ಪಾಸ್‌ ಬುಕ್‌ ಮಾಡಿ

ಇತ್ತೀಚಿನ ಸುದ್ದಿ