ಕೋವಿಶೀಲ್ಡ್ ಲಸಿಕೆ ಕೊಟ್ಟ ನಂತರ ಪುತ್ರಿ ಸಾವನ್ನಪ್ಪಿದ್ದಾಳೆ: ಸೀರಮ್ ಇನ್ಸ್ಟಿಟ್ಯೂಟ್ ವಿರುದ್ಧ ಕೇಸ್ ಹಾಕಿದ ಯುವತಿ ಪೋಷಕರು - Mahanayaka

ಕೋವಿಶೀಲ್ಡ್ ಲಸಿಕೆ ಕೊಟ್ಟ ನಂತರ ಪುತ್ರಿ ಸಾವನ್ನಪ್ಪಿದ್ದಾಳೆ: ಸೀರಮ್ ಇನ್ಸ್ಟಿಟ್ಯೂಟ್ ವಿರುದ್ಧ ಕೇಸ್ ಹಾಕಿದ ಯುವತಿ ಪೋಷಕರು

02/05/2024

ಕೋವಿಶೀಲ್ಡ್ ತೆಗೆದುಕೊಂಡ ನಂತರ ತಮ್ಮ ಪುತ್ರಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿರುವ ಪೋಷಕರು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ ತನ್ನ ಲಸಿಕೆ ಅಪರೂಪದ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡ ನಂತರ ಅಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಅನ್ನು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿತ್ತು. ಇದನ್ನು ದೇಶದಲ್ಲಿ ವ್ಯಾಪಕವಾಗಿ ಕೊಡಲಾಗಿತ್ತು.

ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ರಕ್ತದ ಪ್ಲೇಟ್ಲೆಟ್ ಎಣಿಕೆಗೆ ಕಾರಣವಾಗುವ ಗಂಭೀರ ಪ್ರತಿಕೂಲ ಘಟನೆಯಾದ ಟಿಟಿಎಸ್ – ಥ್ರಾಂಬೋಸಿಸ್ ವಿತ್ ಥ್ರಾಂಬೋಸೈಟೋಪೆನಿಯಾ ಸಿಂಡ್ರೋಮ್ ಸೇರಿದಂತೆ ಕೋವಿಡ್ -19 ಲಸಿಕೆಯು ತಮ್ಮ ಮಗಳ ಸಾವಿಗೆ ಕಾರಣವಾಯಿತು ಎಂಬ ಆರೋಪಗಳ ಮೇಲೆ ಫಾರ್ಮಾಸ್ಯುಟಿಕಲ್ ದೈತ್ಯ ಕಂಪನಿ ವಿರುದ್ಧ ಕ್ರಮ ಮೊಕದ್ದಮೆ ಹೂಡಲಾಗಿದೆ.


Provided by

ಕೋವಿಡ್ -19 ವಿರುದ್ಧದ ಲಸಿಕೆಯು ಟಿಟಿಎಸ್ ಗೆ ಕಾರಣವಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಸ್ಟ್ರಾಜೆನೆಕಾ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ.
ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆಯನ್ನು ಜಾಗತಿಕವಾಗಿ ‘ಕೋವಿಶೀಲ್ಡ್’ ಮತ್ತು ‘ವ್ಯಾಕ್ಸ್ಜೆವ್ರಿಯಾ’ ಎಂಬ ಬ್ರಾಂಡ್ ಹೆಸರುಗಳಲ್ಲಿ ಮಾರಾಟ ಮಾಡಲಾಗಿತ್ತು.

2021 ರಲ್ಲಿ ಕೋವಿಡ್ ಅಪ್ಪಳಿಸಿದಾಗ ಆಗಷ್ಟೇ 12 ನೇ ತರಗತಿಯನ್ನು ಪೂರ್ಣಗೊಳಿಸಿದ್ದ 18 ವರ್ಷದ ರಿಥೈಕಾ ಶ್ರೀ ಓಮ್ತ್ರಿ ವಾಸ್ತುಶಿಲ್ಪವನ್ನು ಅಧ್ಯಯನ ಮಾಡುತ್ತಿದ್ದರು. ಮೇ ತಿಂಗಳಲ್ಲಿ ಅವರು ಕೋವಿಶೀಲ್ಡ್ ನ ಮೊದಲ ಡೋಸ್ ತೆಗೆದುಕೊಂಡಿದ್ದರು. ಏಳು ದಿನಗಳಲ್ಲಿ ರಿಥೈಕಾಗೆ ತೀವ್ರ ಜ್ವರ ಕಾಣಿಸಿಕೊಂಡು ವಾಂತಿ ಮಾಡಲು ಆರಂಭಿಸಿದ್ದಳು. ಎಷ್ಟೆಂದರೆ ಆಕೆಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆಕೆಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತಸ್ರಾವವಿದೆ ಎಂದು ಎಂಆರ್ ಐ ಸ್ಕ್ಯಾನ್ ತೋರಿಸಿತ್ತು. ಎರಡು ವಾರಗಳಲ್ಲೇ ರಿಥೈಕಾ ಸಾವನ್ನಪ್ಪಿದ್ದಳು.

 


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ