ನವದೆಹಲಿ: ಕೊವಿಡ್ ಪಾಸಿಟಿವ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಲು ಬಂದಿದ್ದ ಮಹಿಳೆ ಬೆಡ್ ಗಾಗಿ ಸತತ 3 ಗಂಟೆಗಳ ಕಾಲ ಕಾದು ಕೊನೆಗೆ ಕಾರಿನಲ್ಲಿಯೇ ಕೊನೆಯುಸಿರೆಳೆದ ಘಟನೆ ನೋಯ್ಡಾದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ನಡೆದಿದೆ. 35 ವರ್ಷದ ಕೊವಿಡ್ ಸೋಂಕಿತ ಮಹಿಳೆ ಜಾಗೃತಿ ಗುಪ್ತಾ ಸಾವನ್ನಪ್ಪಿದವರಾಗಿದ್ದಾರೆ. ಇವರ ಪತಿ ಹಾಗೂ ಮಕ್ಕ...