ಮೊನ್ನೆ ನಡೆದ ಒಡಿಶಾ ರೈಲು ಅಪಘಾತದಲ್ಲಿ ಮೃತಪಟ್ಟವರ ಮೃತದೇಹಗಳನ್ನು ಇರಿಸಲು ತಾತ್ಕಾಲಿಕ ಶವಾಗಾರವನ್ನಾಗಿ ಮಾಡಿದ್ದ 65 ವರ್ಷ ಹಳೆಯ ಶಾಲಾ ಕಟ್ಟಡವನ್ನು ಇಂದು ನೆಲಸಮಗೊಳಿಸಲಾಗಿದೆ. ಸುಮಾರು 288 ಮಂದಿಯ ಸಾವಿಗೆ ಕಾರಣವಾದ ರೈಲು ಅಪಘಾತದ ನಂತರ ತಾತ್ಕಾಲಿಕ ಶವಾಗಾರವಾಗಿ ಬಳಸಲಾಗಿದ್ದ ಬಾಲಸೋರ್ನ ಸರ್ಕಾರಿ ಬಹನಾಗಾ ಪ್ರೌಢಶಾಲೆಯನ್ನು ಇಂದು...
ಜೂನ್ 2 ರಂದು ಒಡಿಶಾ ರೈಲು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನನ್ನು ನ್ಯೂಸ್ ಚಾನೆಲ್ ನ ಲೈವ್ ನ್ಯೂಸ್ ವೊಂದು ಹೆತ್ತವರ ಜತೆಗೂಡಿಸಿದ ಮತ್ತೊಂದು ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಯ ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿದ್ದ 15 ವರ್ಷದ ಬಾಲಕ ರಮಾನಂದ ಪಾಸ್ವಾನ್ ಎಂಬಾತ ತನ್ನ ಹೆತ್ತವರನ್ನು ...
ಇದು ಮನಕಲಕುವ ಘಟನೆ. ರೈಲು ದುರಂತದಲ್ಲಿ ತನ್ನ ಮಗ ಸತ್ತಿಲ್ಲ ಎಂಬ ದೃಢ ವಿಶ್ವಾಸದಲ್ಲಿದ್ದ ಕೋಲ್ಕತ್ತಾದ ಬಿಶ್ವಜಿತ್ ಮಾಲಿಕ್ ಎಂಬ ಅಪ್ಪ 200 ಕಿಲೋ ಮೀಟರ್ ಗಿಂತಲೂ ಅಧಿಕ ದೂರ ಸಂಚರಿಸಿ ಅಪಘಾತದ ಸ್ಥಳಕ್ಕೆ ಬಂದಿದ್ದಾರೆ. ಅಲ್ಲಿಂದ ಆಸ್ಪತ್ರೆಗೆ ತೆರಳಿ ತನ್ನ ಮಗನನ್ನು ಹುಡುಕಿದ್ದಾರೆ. ಅಲ್ಲಿ ಎಲ್ಲೂ ಕಾಣದಿದ್ದಾಗ ಶವಗಳನ್ನು ಇಡಲಾಗಿರುವ ಬ...
ಒಡಿಶಾ ತ್ರಿವಳಿ ರೈಲು ಅಪಘಾತದಲ್ಲಿ ಮತ್ತೆ ಮೂವರು ಸಾವನ್ನಪ್ಪಿದ್ದು, ಅಧಿಕೃತ ಸಾವಿನ ಸಂಖ್ಯೆ 278 ಕ್ಕೇರಿದೆ. ಜೂನ್ 2 ರಂದು ನಡೆದ ಬಾಲಸೋರ್ ರೈಲು ಅಪಘಾತದಲ್ಲಿ 278 ಸಾವಿನ ಜೊತೆಗೆ 1,100 ಜನರು ಗಾಯಗೊಂಡಿದ್ದಾರೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಕೆಲವು ಶವಗಳನ್ನು ಎರಡು ಬಾರಿ ಎಣಿಸಲಾಗಿದೆ ಎಂದು ಹೇಳಿದೆ. ಖುರ್ದಾ ರೋಡ್ ವಿಭಾಗೀಯ ...
ಒಡಿಶಾದಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದ ತನಿಖೆಯು ಸಿಬಿಐ ಹೆಗಲಿಗೆ ಬಿದ್ದಿದೆ. ಒಡಿಶಾ ರೈಲು ಅಪಘಾತ ಸಂಬಂಧ ತನಿಖೆಯನ್ನು ಸಿಬಿಐ ತನಿಖೆಗೆ ರೈಲ್ವೇ ಮಂಡಳಿ ಶಿಫಾರಸು ಮಾಡಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ದುರಂತ ನಡೆದ ಸ್ಥಳದಲ್ಲಿರುವ ಅಶ್ವಿನಿ ವೈಷ್ಣವ್, ಅಪಘಾತ ಹೇಗಾಯ್ತು, ಆಡಳಿತವು ಹೊಂದಿರುವ ಮಾಹಿತಿ...
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಕನಿಷ್ಠ 288 ಜನರು ಸಾವನ್ನಪ್ಪಿದ್ದು, 800ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಈ ದುರಂತದ ಬೆನ್ನಲ್ಲೇ ಅತ್ತ ಸಾಮಾಜಿಕ ಮಾಧ್ಯಮಗಳಲ್ಲಿ ಮಹಾ ದುರಂತ ಸೃಷ್ಟಿ ಮಾಡುವ ಘಟನಾವಳಿಗಳು ನಡಿತಾ ಇದೆ. ಈ ಭೀಕರ ರೈಲು ಅಪಘಾತ ನಡೆದ ಸ್ವಲ್ಪ ಸಮಯದಲ್ಲೇ ಸಾಮಾಜಿಕ ಮಾಧ್ಯಮಗಳ...
ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ಸುಮಾರು 300 ಜನರ ಸಾವಿನ ಸುದ್ದಿಯಿಂದ ಹೃದಯ ಒಡೆದಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಖೇದ ವ್ಯಕ್ತಪಡಿಸಿದ್ದಾರೆ. 'ದುರಂತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಮತ್ತು ಈ ಭಯಾನಕ ಘಟನೆಯಲ್ಲಿ ಗಾಯಗೊಂಡ ಅನೇಕರಿಗೆ ನಮ್ಮ ಪ್ರಾರ್ಥನೆಗಳು' ಎಂದು ಅಮೆರಿಕ ಅಧ್ಯಕ್ಷರು ತಮ್ಮ ಹೇಳಿಕೆಯಲ...
ಒಡಿಶಾದ ಬಾಲಸೋರ್ ನಲ್ಲಿ ನಡೆದ ರೈಲು ಅಪಘಾತ ಸಂಭವಿಸಿದ ಸ್ಥಳಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ. ಅಂದಾಜಿನ ಪ್ರಕಾರ ಈ ರೈಲು ದುರಂತದಲ್ಲಿ 261 ಕ್ಕಿಂತಲೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬಾಲಸೋರ್ ಜಿಲ್ಲೆಯ ಬಹನಾಗ...
ಒಡಿಶಾದ ಬಾಲಸೋರ್ ಬಳಿ ಸಂಭವಿಸಿದ ದೇಶದ ಅತಿ ದೊಡ್ಡ ಭೀಕರ ರೈಲು ಅಪಘಾತದಲ್ಲಿ 250ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದು, 900ಕ್ಕೂ ಹೆಚ್ಚು ಜನರು ಇನ್ನೂ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅಪಘಾತದ ಸ್ಥಳಕ್ಕೆ ಧಾವಿಸಿದ ಎಲ್ಲರಲ್ಲಿಯೂ ಇದ್ದದ್ದು ಒಂದೇ ಪ್ರಾರ್ಥನೆ. ಪ್ರತಿಯೊಂದು ಜೀವವನ್ನೂ ಉಳಿಸಬೇಕು ಎಂಬುದು. ಅನೇಕ ಮಂದಿ, ಅನೇಕ...
ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 233 ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ಸಂಬಂಧ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧ...