ಪ್ಲಾಸ್ಟಿಕ್ ನಿಂದ ನಮ್ಮ ಪರಿಸರಕ್ಕೆ ನಾನಾ ರೀತಿಯ ತೊಂದರೆಗಳಿವೆ ಎನ್ನುವುದು ತಿಳಿದಿದ್ದರೂ, ಈವರೆಗೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಯಾವುದೇ ಸರ್ಕಾರಗಳಿಂದ ಸಾಧ್ಯವಾಗಿಲ್ಲ. ಪ್ರತಿ ಬಾರಿಯೂ ಪ್ಲಾಸ್ಟಿಕ್ ನಿಷೇಧ ಎಂಬ ಪ್ರಹಸನಗಳು ನಡೆದು ಬಳಿಕ ಎಂದಿನಂತೆಯೇ ಪ್ಲಾಸ್ಟಿಕ್ ಬಳಕೆ ಮುಂದುವರಿಯುತ್ತಿದೆ. ಮಳೆಗಾಲ ಆರಂಭವಾ...