ಚಿಕ್ಕಮಗಳೂರು: ಸೊಪ್ಪು ಖರೀದಿಗಾಗಿ, ಅಗತ್ಯ ಸಾಮಗ್ರಿ ಖರೀದಿಗೆ ನೀಡಲಾಗಿರುವ ಸಮಯದಲ್ಲಿಯೇ ಬಂದಿದ್ದ ಮುಸ್ಲಿಮ್ ಮಹಿಳೆಗೆ ಲಾಠಿಯಿಂದ ಹಲ್ಲೆ ನಡೆಸಿ ಅವರ ಕೈಮುರಿದ ಗ್ರಾಮಲೆಕ್ಕಿಗನ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾನು ಕುಕ್ಕೆಯಲ್ಲಿ ಸೊಪ್ಪನ್ನು ತಲೆಯ ಮೇಲೆ ಹೊತ್ತುಕೊಂಡು ಎಸ್ಬಿಐ ಬ್ಯಾಂಕ್ ಮುಂಭಾಗದಲ್ಲ...