ಮುಸ್ಲಿಮ್ ಮಹಿಳೆಯ ಮೇಲೆ ಗ್ರಾಮಲೆಕ್ಕಿಗನಿಂದ ಹಲ್ಲೆ | ದೂರು ದಾಖಲು - Mahanayaka
4:22 AM Thursday 13 - February 2025

ಮುಸ್ಲಿಮ್ ಮಹಿಳೆಯ ಮೇಲೆ ಗ್ರಾಮಲೆಕ್ಕಿಗನಿಂದ ಹಲ್ಲೆ | ದೂರು ದಾಖಲು

shabana
26/05/2021

ಚಿಕ್ಕಮಗಳೂರು: ಸೊಪ್ಪು ಖರೀದಿಗಾಗಿ, ಅಗತ್ಯ ಸಾಮಗ್ರಿ ಖರೀದಿಗೆ ನೀಡಲಾಗಿರುವ ಸಮಯದಲ್ಲಿಯೇ ಬಂದಿದ್ದ ಮುಸ್ಲಿಮ್ ಮಹಿಳೆಗೆ ಲಾಠಿಯಿಂದ ಹಲ್ಲೆ ನಡೆಸಿ ಅವರ ಕೈಮುರಿದ ಗ್ರಾಮಲೆಕ್ಕಿಗನ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾನು ಕುಕ್ಕೆಯಲ್ಲಿ ಸೊಪ್ಪನ್ನು ತಲೆಯ ಮೇಲೆ ಹೊತ್ತುಕೊಂಡು ಎಸ್‌ಬಿಐ ಬ್ಯಾಂಕ್ ಮುಂಭಾಗದಲ್ಲಿ ಗ್ರಾಹಕರಿಗೆ ಸೊಪ್ಪನ್ನು ನೀಡುತ್ತಿದ್ದ ವೇಳೆ, ಸ್ಥಳಕ್ಕೆ ಬಂದ ಗ್ರಾಮ ಲೆಕ್ಕಾಧಿಕಾರಿ ಗಿರೀಶ್ ತನ್ನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಲ್ಲಿದ್ದ ಪೈಪಿನಿಂದ ಹೊಡೆದಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಅದೇ ರಸ್ತೆಯಲ್ಲಿ ಬರುತ್ತಿದ್ದ ಅಮ್ಜದ್, ಹಂಝಾರವರಿಗೂ ಹೊಡೆದಿದ್ದು, ತನ್ನನ್ನು ಪುತ್ರ ಜಮೀರ್ ಎಂಜಿಎಂ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತೇನೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

ಸದ್ಯ ದೂರುದಾರೆ ಶಬಾನ ಅವರ ದೂರಿನನ್ವಯ ಪೊಲೀಸರು ಗಿರೀಶ್ ವಿರುದ್ಧ ಐಪಿಸಿ ಸೆಕ್ಷನ್ 324, 504ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಈವರೆಗೆ ಆತನನ್ನು ಬಂಧಿಸಿಲ್ಲ.

ಇತ್ತೀಚಿನ ಸುದ್ದಿ