ದಲಿತ ಯುವಕನಿಗೆ ಮೂತ್ರ ಕುಡಿಸಿದಾಗ ಧ್ವನಿಯೆತ್ತದ ಸಂಸದೆ ಶೋಭಾಗೆ ಮತಾಂತರದ ಚಿಂತೆ! - Mahanayaka

ದಲಿತ ಯುವಕನಿಗೆ ಮೂತ್ರ ಕುಡಿಸಿದಾಗ ಧ್ವನಿಯೆತ್ತದ ಸಂಸದೆ ಶೋಭಾಗೆ ಮತಾಂತರದ ಚಿಂತೆ!

shobha karandlaje
25/05/2021

ಮೂಡಿಗರೆ: ಕೊರೊನಾ ಸಂದರ್ಭದಲ್ಲಿ ಜನರಿಗೆ ಆತ್ಮವಿಶ್ವಾಸ ತುಂಬಬೇಕಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರು, ಚರ್ಚ್ ಗಳಲ್ಲಿ ಕೊವಿಡ್ ವ್ಯಾಕ್ಸಿನ್ ತೆಗೆದುಕೊಳ್ಳದಂತೆ  ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದ್ದರು. ಇದೀಗ ತನ್ನ ಹೇಳಿಕೆಗೆ ತಾನು ಈಗಲೂ ತ ಬದ್ಧವಾಗಿದ್ದೇನೆ ಎಂದು ಅವರು ಹೇಳಿದ್ದಾರೆ.


Provided by

ಪರಿಶಿಷ್ಟ ಜಾತಿ ಮತ್ತು ಪಂಗಡದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಆ ಪ್ರದೇಶದಲ್ಲಿ ಮತಾಂತರ ಪ್ರಕ್ರಿಯೆಗಳು ನಡೆಯುತ್ತದೆ. ನನ್ನ ಹೇಳಿಕೆಗೆ ನಾನು ಬದ್ಧಳಿದ್ದೇನೆ ಎಂದು ಅವರು ಹೇಳಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆಗೆ ಪ.ಜಾತಿ, ಪಂಗಡದವರು ಮತಾಂತರ ಆಗುವುದು ಬೇಗ ಕಾಣುತ್ತದೆ. ಆದರೆ, ಮೂಡಿಗೆರೆಯಲ್ಲಿ ಒಬ್ಬ ದಲಿತ ಯುವಕನಿಗೆ ಸಂಬಂಧವೇ ಇಲ್ಲದ ಪ್ರಕರಣದಲ್ಲಿ ಅರೆಸ್ಟ್ ಮಾಡಿ, ಮಾರಣಾಂತಿಕವಾಗಿ ಥಳಿಸಿ ಮೂತ್ರ ಕುಡಿಸಿದ ವಿಚಾರ ಇನ್ನೂ ತಿಳಿದಿಲ್ಲ. ಮೂಡಿಗೆರೆಯಲ್ಲಿ ನಡೆದಿರುವ ಘಟನೆಯ ಬಗ್ಗೆ ಬಗ್ಗೆ ಕನಿಷ್ಠ ಒಂದು ಹೇಳಿಕೆಯನ್ನು ಶೋಭಾ ಕರಂದ್ಲಾಜೆ ನೀಡಿಲ್ಲ. ಆದರೆ ಚರ್ಚ್ ನೊಳಗೆ ಯಾರೋ ಪ.ಜಾತಿ, ಪಂಗಡದವರು ವ್ಯಾಕ್ಸಿನ್ ತೆಗೆದುಕೊಳ್ಳಬೇಡಿ ಎಂದು ಹೇಳುತ್ತಿದ್ದಾರೆ ಎನ್ನುವುದು ಕೇಳಿದೆ. ನೀವು ಮೊದಲು ನಿಮಗೆ ಯಾರು ಮಾಹಿತಿ ನೀಡಿದ್ದಾರೋ ಅದನ್ನು ಪ್ರೆಸ್ ಮೀಟ್ ಕರೆದು ಬಹಿರಂಗಗೊಳಿಸಿ. ಅಥವಾ ಯಾವ ಚರ್ಚ್ ನಲ್ಲಿ ಇಂತಹ ಘಟನೆ ನಡೆದಿದೆಯೋ ಆ ಚರ್ಚ್ ಮೇಲೆ ಪ್ರಕರಣ ದಾಖಲಿಸಿ. ಅದು ಬಿಟ್ಟು ಸಾರ್ವಜನಿಕವಾಗಿ ಈ ರೀತಿ ಅನಗತ್ಯ ಹೇಳಿಕೆಗಳನ್ನು ನೀಡುತ್ತಾ ತಿರುಗಾಡುವುದು ಜನ ಪ್ರತಿನಿಧಿಗಳಿಗೆ ಶೋಭೆ ತರುವಂತಹ ವಿಚಾರ ಅಲ್ಲ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿದೆ.

ಶೋಭಾ ಕರಂದ್ಲಾಜೆ ದಲಿತರ ಮೇಲೆ ದೌರ್ಜನ್ಯವಾದಗ ಧ್ವನಿಯೆತ್ತಿಲ್ಲ. ಕನಿಷ್ಠ ಖಂಡಿಸುವ ಕೆಲಸ ಮಾಡಿಲ್ಲ. ಪ.ಜಾತಿ ಮತ್ತು ಪಂಗಡಗಳು ನಿಮ್ಮ ಅದೀನದಲ್ಲಿಯೂ ಇಲ್ಲ. ಅವರಿಗೆ ಯಾವ ಧರ್ಮ ಬೇಕೋ ಅದನ್ನು ಅವರು ಆರಿಸಿಕೊಳ್ಳುತ್ತಾರೆ. ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗದಿದ್ದರೆ ಸುಮ್ಮನಿರಿ, ಅದು ಬಿಟ್ಟು ಜನರ ನಡುವೆ ಜಗಳ ಹಚ್ಚಿ ಮಜಾ ನೋಡುವ ಕೆಲಸ ಮಾಡಬೇಡಿ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ