ಇಡೀ ವಿಶ್ವವನ್ನೇ ಪರಿಣಾಮಕಾರಿಯಾಗಿ ವ್ಯಾಪಿಸಿದ ಭಾರತದ ಏಕೈಕ ಧರ್ಮ ಎಂದರೆ ಅದು ಬೌದ್ಧ ಧರ್ಮ. ಬೌದ್ಧ ಧರ್ಮ ಎಂದರೇನು ಎಂದು ಕೇಳಿದರೆ, ಬಹುತೇಕರು. ಅದೊಂದು ನಾಸ್ತಿಕವಾದ ಎಂದೇ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಬೌದ್ಧ ಧರ್ಮ ಎನ್ನುವುದು ಜಗತ್ತಿನ ಹಾಗೂ ಮಾನವನ ಬದುಕಿನ ವಾಸ್ತವವನ್ನು ತಿಳಿಸುವ ಒಂದು ಧರ್ಮವಾಗಿದೆ. ಅದರಲ್ಲೂ ಡಾ.ಬಾಬಾ ಸ...