8:28 AM Saturday 20 - December 2025

ಬಸ್ ಬರುತ್ತಿದ್ದಂತೆ ಹಾರಿ ಮಹಿಳೆ ಆತ್ಮಹತ್ಯೆ: ಮಕ್ಕಳ ಫೀಸ್ ಕಟ್ಟಲಾಗದೇ ಸೂಸೈಡ್ ಮಾಡಿದ್ರಾ ಮಹಿಳೆ..?

18/07/2023

ಮಹಿಳೆಯೊಬ್ಬರು ಚಲಿಸುತ್ತಿದ್ದ ಬಸ್ಸಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.

ಸೇಲಂ ಕಲೆಕ್ಟರೇಟ್‌ನಲ್ಲಿ ತಾತ್ಕಾಲಿಕ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ 39 ವರ್ಷದ ಪಾಪ್ಪತಿ ಈ ರೀತಿ ಬಸ್ಸಿನ ಮುಂದೆ ಹಾರಿ ಸಾವಿಗೀಡಾದವರು. ಈ ಘಟನೆಯ 48 ಸೆಕೆಂಡ್‌ಗಳ ಸಿಸಿಟಿವಿ ವಿಡಿಯೋದಲ್ಲಿ ಮಹಿಳೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಾಣಿಸುತ್ತದೆ. ನಂತರ ವೇಗವಾಗಿ ಬರುತ್ತಿದ್ದ ಬಸ್‌ನ ಕಡೆಗೆ ಇದ್ದಕ್ಕಿದ್ದಂತೆ ರಸ್ತೆ ದಾಟುತ್ತಿರುವುದನ್ನು ತೋರಿಸುತ್ತದೆ. ಬಸ್ಸು ಆಕೆಗೆ ಡಿಕ್ಕಿ ಹೊಡೆದು ಆಕೆ ರಸ್ತೆಯಲ್ಲಿ ಬೀಳುತ್ತಿರುವುದು ಕಾಣಿಸುತ್ತದೆ.

ತಾನು ಸತ್ತರೆ ಸಿಗುವ ಪರಿಹಾರದಿಂದ ತನ್ನ ಮಕ್ಕಳ ಕಾಲೇಜು ಶುಲ್ಕವನ್ನು ಪಾವತಿಸಬಹುದು ಎಂಬ ಉದ್ದೇಶದಿಂದ ಆಕೆ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.

‘ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಆರಂಭದಲ್ಲಿ ನಾವು ಅಪಘಾತದಿಂದ ಸಾವಿನ ಪ್ರಕರಣವನ್ನು ದಾಖಲಿಸಿದ್ದೇವೆ. ಈಗ ನಾವು ಅದನ್ನು ಬದಲಾಯಿಸುತ್ತಿದ್ದೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.

ಸಿಂಗಲ್ ಮದರ್ ಆಗಿರುವ ಪಾಪ್ಪತಿ ಅವರ ಮಕ್ಕಳು ಕಾಲೇಜಿನಲ್ಲಿ ಓದುತ್ತಿದ್ದಾರೆ. ಮಗಳು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಕೋರ್ಸ್‌ನ ಅಂತಿಮ ವರ್ಷದಲ್ಲಿ ಓದುತ್ತಿದ್ದು ಮಗ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ಓದುತ್ತಿದ್ದಾನೆ. ಆಕೆ ಬಡ ಕುಟುಂಬದವಳು. ಯಾರೋ ಅವಳನ್ನು ದಾರಿ ತಪ್ಪಿಸಿದ್ದಾರೆ. ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version