12:55 AM Thursday 11 - December 2025

ತೌಕ್ತೆ ಚಂಡಮಾರುತಕ್ಕೆ ಕರಾವಳಿ ತತ್ತರ | ಮೀನುಗಾರ ಸಾವು, ಕೊಚ್ಚಿ ಹೋದ ಹಿಂದೂ ರುದ್ರಭೂಮಿ

tauktae cyclone
15/05/2021

ಮಂಗಳೂರು: ತೌಕ್ತೆ ಚಂಡಮಾರುತಕ್ಕೆ ಕರಾವಳಿ ತತ್ತರಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾರವಾರದಲ್ಲಿ ನಿನ್ನೆ ರಾತ್ರಿ ಆರಂಭವಾಗಿದ್ದ ಮಳೆ ಮುಂದುವರಿದಿದ್ದು, ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ.

ಇನ್ನೂ ಮಳೆಗೆ ಕಾರವಾರದಲ್ಲಿ ಓರ್ವ ಮೀನುಗಾರ ಮೃತಪಟ್ಟಿದ್ದಾರೆ. ಜಾಲಿಕೋಡಿ ನಿವಾಸಿ ಲಕ್ಷ್ಮಣ ಈರಪ್ಪ ನಾಯ್ಕ ಎಂಬ 60 ವರ್ಷ ವಯಸ್ಸಿನ ಮೀನುಗ್ಆರ ಮೃತಪಟ್ಟವರಾಗಿದ್ದು, ದೋಣಿಯೊಂದು ಅಲೆಗಳ ಹೊಡೆಕ್ಕೆ ನೀರು ಪಾಲಾಗುತ್ತಿತ್ತು. ಅದನ್ನು ತಡೆದು ದಡದಿಂದ ಮೇಲೆ ತರಲು ಅವರು ನೀರಿಗೆ ಇಳಿದಿದ್ದರು. ಈ ವೇಳೆ ವೇಗವಾಗಿ ಅಲೆಯೊಂದು ಅಪ್ಪಳಿಸಿದ್ದು, ಲಂಗಾರು ಹಾಕಿದ್ದ ಇನ್ನೊಂದು ಬೋಟು ವೇಗವಾಗಿ ಚಲಿಸಿ ನೀರು ಪಾಲಾಗುತ್ತಿದ್ದ ಬೋಟ್ ಗೆ ಅಪ್ಪಳಿಸಿದೆ. ಈ ವೇಳೆ ಮಧ್ಯೆ ಸಿಲುಕಿಕೊಂಡ ಈರಪ್ಪ ನಾಯ್ಕ ಗಂಭೀರ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇನ್ನೂ ಉಳ್ಳಾಲದ ಸೋಮೇಶ್ವರ ಸಮುದ್ರ ತೀರದಲ್ಲಿ ಸಮುದ್ರ ಭಯಾನಕವಾಗಿ ಅಬ್ಬರಿಸುತ್ತಿದೆ. ಬೃಹತ್ ಅಲೆಯೊಂದು ದಡಕ್ಕೆ ಅಪ್ಪಳಿಸಿದ್ದರಿಂದ ಸೋಮೇಶ್ವರ ರುದ್ರಪಾದ ಬಳಿ ಇರುವ  ಹಿಂದೂ ರುದ್ರಭೂಮಿ ಸಮುದ್ರಪಾಲಾಗಿದೆ. ಇನ್ನು ಬೃಹತ್ ಅಲೆಗಳ ಪರಿಣಾಮ ಸಮುದ್ರದ ದಂಡೆಯಲ್ಲಿ ವಾಸಿಸುತ್ತಿರುವ ಜನರಿಗೆ ಆತಂಕ ಸೃಷ್ಟಿಯಾಗಿದೆ. ಸಮುದ್ರದ ಸುತ್ತಮುತ್ತಲಿನ ಮನೆಗಳಿಗೆ ನುಗ್ಗುತ್ತಿದ್ದೆ. ಉಳ್ಳಾಲದ ಕಿಲೇರಿಯಾನಗರ, ಮುಕ್ಜಚ್ಚೇರಿ ಬಳಿ ಮಸೀದಿಯೊಂದು ಅಪಾಯದ ಸ್ಥಿತಿಯಲ್ಲಿದೆ. ಕೋಟೆಪುರ , ಸೀಗ್ರೌಂಡ್ ಬಳಿ ಮನೆ ಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿದೆ.

ಇನ್ನೂ ಅಂಕೋಲಾ ತಾಲ್ಲೂಕಿನ ಹಾರವಾಡದಲ್ಲಿ ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಸಮೀಪದ ಗಾಳಿ ಗಿಡಗಳು, ಕಲ್ಲುಗಳು ನೀರು ಪಾಲಾಗುವ ಆತಂಕ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮೀನುಗಾರರು ದೋಣಿಗಳನ್ನು ದಡದಿಂದ ಮೇಲೆ ತಂದಿದ್ದಾರೆ. ಗೋಕರ್ಣದ ದುಬ್ಬನಸಸಿ ಹಾಗೂ ಮೇನ್ ಬೀಚ್ ಪ್ರದೇಶದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಗಾಳಿಯ ವೇಗ ಹೆಚ್ಚಿದರೆ ಕಡಲ್ಕೊರೆತ ಉಂಟಾಗುವ ಸಾಧ್ಯತೆಯಿದೆ.

ಇತ್ತೀಚಿನ ಸುದ್ದಿ

Exit mobile version