12:39 AM Saturday 25 - October 2025

ಬಾರ್ಬಡೋಸ್‌ನಿಂದ ಟೀಂ ಇಂಡಿಯಾ ನಿರ್ಗಮನ ವಿಳಂಬ: ನಾಳೆ ದೆಹಲಿ ತಲುಪುವ ನಿರೀಕ್ಷೆ

03/07/2024

ದ್ವೀಪ ರಾಷ್ಟ್ರದಲ್ಲಿ ಬೆರಿಲ್ ಚಂಡಮಾರುತದ ಬೆದರಿಕೆಯ ಮಧ್ಯೆ ಭಾರತೀಯ ತಂಡವು ಬಾರ್ಬಡೋಸ್ ನಿಂದ ನಿರ್ಗಮಿಸುವುದು ಮತ್ತು ದೆಹಲಿಗೆ ಆಗಮಿಸುವುದು ಮತ್ತಷ್ಟು ವಿಳಂಬವಾಗಿದೆ. ಅವರು ಮಂಗಳವಾರ ಸ್ಥಳೀಯ ಸಮಯ ಸಂಜೆ 6 ಗಂಟೆಗೆ ಬಾರ್ಬಡೋಸ್ ನಿಂದ ಹೊರಟು ಬುಧವಾರ ಸಂಜೆ ವೇಳೆಗೆ ದೆಹಲಿಯನ್ನು ತಲುಪುವ ನಿರೀಕ್ಷೆ ಇತ್ತು. ಆದರೆ ಇದೀಗ ಈ ಪ್ಲ್ಯಾನ್ ಬದಲಾವಣೆ ಆಗಿದೆ.

ಇಂಡಿಯಾ ಟುಡೇಯ ವಿಕ್ರಾಂತ್ ಗುಪ್ತಾ ಅವರ ಪ್ರಕಾರ, ಜುಲೈ 4 ರ ಗುರುವಾರ ಮುಂಜಾನೆಯ ಮೊದಲು ಬರಕ್ಕಾಗಲ್ಲ. ಬಾರ್ಬಡೋಸ್ ನಿಂದ ಭಾರತ ತಂಡದ ನಿರ್ಗಮನ ಮತ್ತು ದೆಹಲಿಗೆ ಆಗಮನ ಮತ್ತಷ್ಟು ವಿಳಂಬವಾಗಿದೆ. ಗುರುವಾರ ಮುಂಜಾನೆ 4-5 ಗಂಟೆಯ ಮೊದಲೇ ಅವರು ದೆಹಲಿಯಲ್ಲಿ ಇಳಿಯುವುದಿಲ್ಲ ಎಂದು ತೋರುತ್ತಿದೆ. ಅಂದ್ರೆ ಭಾರತ ತಂಡವು ಗುರುವಾರ ಬೆಳಿಗ್ಗೆ 6 ಗಂಟೆಗೆ ದೆಹಲಿಯಲ್ಲಿ ಇಳಿಯಲಿದೆ ಎಂದು ತಿಳಿದುಬಂದಿದೆ ಎಂದಿದ್ದಾರೆ.

ದಕ್ಷಿಣ ಆಫ್ರಿಕಾವನ್ನು ಮಣಿಸಿದ ಟೀಂ ಇಂಡಿಯಾ 2024ರ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಜುಲೈ 1 ರ ಸೋಮವಾರ ಬೆರಿಲ್ ಚಂಡಮಾರುತವು ಭೂಕುಸಿತವನ್ನು ಉಂಟುಮಾಡಿದ್ದರಿಂದ ಅವರು ಅಂದಿನಿಂದ ದ್ವೀಪ ರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version