ಬೀಚ್ ಬಳಿ ಕಸ ತಂದು ಹಾಕುತ್ತಿದ್ದ ಟೆಂಪೋ ಚಾಲಕನಿಗೆ ದಂಡ!

tempo
22/06/2023

ಮಂಗಳೂರಿನ ಉಳ್ಳಾಲ ಬೀಚ್ ಬಳಿ ಕಸ ತಂದು ಹಾಕುತ್ತಿದ್ದ ಟೆಂಪೋವೊಂದನ್ನು ಪತ್ತೆಹಚ್ಚಿದ ಉಳ್ಳಾಲ ‌ನಗರಸಭೆ ಸಿಬ್ಬಂದಿ ದಂಡ ವಸೂಲಿ ಮಾಡಿದ ಘಟನೆ ನಡೆದಿದೆ. ಮುಕೇಶ್ ಎಂಬುವವರು ಕಸವನ್ನು ತುಂಬಿಕೊಂಡು ಉಳ್ಳಾಲದಲ್ಲಿ ವಿಲೇವಾರಿ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಗುರುವಾರ ಉಳ್ಳಾಲದಲ್ಲಿ ಕಸ ಸ್ವಚ್ಛ ಮಾಡುವ ಕೆಲಸ ನಡೆಯುತ್ತಿದ್ದ ವೇಳೆ ಆಟೋ ರಿಕ್ಷಾ ಕಸದ ರಾಶಿ ಇದ್ದ ಜಾಗಕ್ಕೆ ಬಂದಿತ್ತು. ಅಲ್ಲೇ ಇದ್ದ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ತುಂಬಿದ ಕಸ ಪತ್ತೆ ಆಗಿದೆ.

ತಕ್ಷಣ ಅವರು ಪೌರಾಯುಕ್ತ ವಾಣಿ ವಿ. ಆಳ್ವ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ವಾಣಿ ವಿ ಆಳ್ವ ಅವರು ಕಸ ತಂದಿದ್ದ ಟೆಂಪೋ ಚಾಲಕನಿಗೆ ದಂಡ ವಿಧಿಸಿದ್ದು, ಈ ಬಗ್ಗೆ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version