ಉಜಿರೆ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

ananda
28/07/2022

ಉಜಿರೆ: ಕಾಯಿ ಕೀಳಲು ತೆಂಗಿನಮರಕ್ಕೆ ಹತ್ತಿದ  ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕೆಳಗೆ ಬಿದ್ದು ಸಾವನ್ನಪ್ಪಿದ  ಘಟನೆ ಉಜಿರೆಯಲ್ಲಿ ಬುಧವಾರ ಸಂಜೆ ನಡೆದಿದೆ.

ಉಜಿರೆ ಗ್ರಾಮದ ನಿನ್ನಿಕಲ್ಲು  ಪಾಲೆಂಜ ಎಂಬಲ್ಲಿಯ ನಿವಾಸಿ ಆನಂದ(40) ಮೃತಪಟ್ಟ ದುರ್ದೈವಿ. ತೆಂಗಿನ ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ  ಉಜಿರೆಯ  ಖಾಸಗಿ ಆಸ್ಪತ್ರೆಗೆ  ಕರೆದುಕೊಂಡು ಹೋಗುವ ವೇಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಅಡಕೆಗೆ ಔಷಧಿ ಸಿಂಪಡಿಸುವ, ತೆಂಗಿನಕಾಯಿ ಕೀಳುವ ಹಾಗೂ ಇತರ ಕೆಲಸಗಳೊಂದಿಗೆ ಅವರು ಚಾಲಕರಾಗಿಯು ದುಡಿಯುತ್ತಿದ್ದರು. ಅವರಿಗೆ ಪತ್ನಿ,ಪುತ್ರ ಹಾಗೂ ಪುತ್ರಿ ಇದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version