ತರಕಾರಿ ಮಾರುಕಟ್ಟೆಯಲ್ಲಿ ತಂದೆಯ ಕ್ರಿಯಾಕರ್ಮ ನೆರವೇರಿಸಿದ ಪುತ್ರಿಯರು!

libation
20/04/2021

ಛತ್ತೀಸ್ ಗಢ:  ಕೊರೊನಾ ಬಹಳಷ್ಟು ಜನರನ್ನು ತಬ್ಬಲಿ ಮಾಡುತ್ತಿದೆ.  ಇಬ್ಬರು ಪುತ್ರಿಯರು ಕೊರೊನಾದಿಂದ ಸಾವಿಗೀಡಾದ ತಮ್ಮ ತಂದೆಯ ಕ್ರಿಯಾ ಕರ್ಮಗಳನ್ನು ತಾವೇ ನೆರೆವೇರಿಸಿದ್ದಾರೆ. ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಸಹೋದರಿಯರು ತಮ್ಮ ತಂದೆಯ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಏಪ್ರಿಲ್ 9 ರಂದು ಈ ಪುತ್ರಿಯರ ತಂದೆ ನಿಧನರಾಗಿದ್ದರು.  ಇದಾದ ಬಳಿಕ ಮೃತರ 14 ಹಾಗೂ 19 ವರ್ಷದ ಪುತ್ರಿಯರು ನವಾಪರದಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಪಿಂಡ ಪ್ರಧಾನ ಕಾರ್ಯ ನೆರವೇರಿಸಿದ್ದಾರೆ.

ಈ ಕುಟುಂಬದಲ್ಲಿ ಗಂಡು ಮಕ್ಕಳಿರಲಿಲ್ಲ. ಹೀಗಾಗಿ ಹೆಣ್ಣು ಮಕ್ಕಳೇ ತಂದೆಗೆ ಪಿಂಡ ಪ್ರಧಾನ ಮಾಡಿದ್ದಾರೆ. ಒಂದು ಕಾಲದಲ್ಲಿ ಹೆಣ್ಣು ಮಕ್ಕಳಿಗೆ ತಂದೆಯ ಯಾವುದೇ ಕಾರ್ಯಗಳನ್ನು ಮಾಡುವಂತಿರಲಿಲ್ಲ. ಆದರೆ ಅಂಬೇಡ್ಕರ್ ಅವರ ಸಮಾನತೆಯ  ಸಾಮಾಜಿಕ ಬದಲಾವಣೆ ಇದೀಗ ದೇಶಾದ್ಯಂತ ಎದ್ದು ನಿಂತಿದೆ.

ಇತ್ತೀಚಿನ ಸುದ್ದಿ

Exit mobile version