9:38 AM Thursday 4 - December 2025

ಪತ್ನಿ ಬಿಟ್ಟು ಹೋದಳು ಎಂಬ ಕೋಪಕ್ಕೆ ತನ್ನ ನಾಲ್ಕು ಮಕ್ಕಳನ್ನು ಕೊಂದ ತಂದೆ!

10/02/2021

ಜೈಪುರ: ಪತ್ನಿ ಬಿಟ್ಟು ಹೋದಳು ಎಂದು ನೊಂದ ಪತಿಯೋರ್ವ ತನ್ನ ನಾಲ್ಕು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ಬನ್ಸ್ವಾರ ಜಿಲ್ಲೆಯಲ್ಲಿ ನಡೆದಿದೆ.

ಬಾಬು ಎಂಬ ವ್ಯಕ್ತಿ ತನ್ನ ಪತ್ನಿಯ ಜೊತೆಗೆ ಜಗಳವಾಡಿದ್ದು, ಈ ಕೋಪದಲ್ಲಿ ಪತ್ನಿ ತವರಿಗೆ ಹೋಗಿದ್ದಾಳೆ.  ಪತ್ನಿಯ ಮೇಲೆ ವಿಪರೀತವಾಗಿ ಕೋಪಗೊಂಡಿದ್ದ ಬಾಬು ಮಂಗಳವಾರ ರಾತ್ರಿ ಕಂಠಮಟ್ಟ ಕುಡಿದು ಮನೆಗೆ ಬಂದಿದ್ದಾನೆ.

ಮನೆಗೆ ಬಂದ ಬಾಬು ಪತ್ನಿಯ ಮೇಲಿನ ಕೋಪವನ್ನು ತನ್ನ 2ರಿಂದ 8 ವರ್ಷದ ಮಕ್ಕಳಾದ ರಾಕೇಶ್​, ಭಾಗಿಯಾ, ವಿಕ್ರಮ್​ ಮತ್ತು ಗಣೇಶ್ ಮೇಲೆ ತೀರಿಸಿದ್ದು, ಎಲ್ಲ ಮಕ್ಕಳನ್ನು ಕೊಂದು ತಾನೂ ನೇಣಿಗೆ ಶರಣಾಗಿದ್ದಾನೆ.

ಬುಧವಾರ ಬೆಳಗ್ಗೆ ಸ್ಥಳೀಯರು ಮನೆಯೊಳಗೆ ನಡೆದಿರುವ ಭೀಕರ ದೃಶ್ಯವನ್ನು ಗಮನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇತ್ತೀಚಿನ ಸುದ್ದಿ

Exit mobile version