‘ನಮ್ಮ ಅತ್ತೆ ಬೇಗ ಸಾಯಬೇಕು’: ದೇವರಿಗೆ ಸುಪಾರಿ ನೀಡಿದ ಸೊಸೆ!

50 rs
06/03/2024

ಕಲಬುರಗಿ: ಅತ್ತೆ ಸೊಸೆ ಜಗಳಗಳು ಇಂದು ನಿನ್ನೆಯದ್ದಲ್ಲ, ಸಾಕಷ್ಟು ಮನೆಗಳಲ್ಲಿ ಅತ್ತೆ ಸೊಸೆಯ ಜಗಳ ಸರ್ವೇ ಸಾಮಾನ್ಯವಾಗಿರುತ್ತದೆ. ಇಲ್ಲೊಬ್ಬಳು ಸೊಸೆ, ಅತ್ತೆಯನ್ನು ಸಾಯಿಸುವಂತೆ ದೇವರಿಗೆ ಸುಪಾರಿ ನೀಡಿರುವ ಘಟನೆ ನಡೆದಿದೆ.

ಸೊಸೆಯೊಬ್ಬಳು ದೇವಲ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವರಿಗೆ ತನ್ನ ಅತ್ತೆ ಬೇಗ ಸಾಯ ಬೇಕು ಎಂದು ಸುಪಾರಿ ನೀಡಿದ್ದಾಳೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗುತ್ತಿದ್ದು, ಸಾಕಷ್ಟು ಜನರಿಗೆ ಇದೊಂದು ಹಾಸ್ಯದ ವಸ್ತುವಾಗಿದೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ ದತ್ತೇತ್ರೇಯ ದೇವರ ಕಾಣಿಕೆ ಹುಂಡಿಯಲ್ಲಿ ಪತ್ತೆಯಾದ 50 ರೂಪಾಯಿ ಮುಖ ಬೆಲೆಯ ನೋಟಿನಲ್ಲಿ ಸೊಸೆಯೊಬ್ಬಳು ‘ನಮ್ಮ ಅತ್ತೆ ಬೇಗ ಸಾಯಬೇಕು’ ಎಂದು ಬರೆದು ಹರಕೆ ಹಾಕಿದ್ದಾಳೆ.

ಅತ್ತೆಯ ಕಾಟದಿಂದ ಬೇಸತ್ತ ಸೊಸೆ ತನ್ನ ಅತ್ತೆಯ ಸಾವು ಬಯಸಿ, ದೇವರಿಗೆ ಹರಕೆ ಹಾಕಿದ್ದಾಳೆ, ತಾನು ಹಾಕುವ ಕಾಣಿಕೆಯನ್ನು ದೇವರೇ ತೆಗೆದು ಓದಿ, ಅತ್ತೆಗೆ ಬುದ್ಧಿ ಕಲಿಸುತ್ತಾರೆ ಎನ್ನುವುದು ಸೊಸೆಯ ಮುಗ್ಧತನ. ಆದ್ರೆ ದೇವಸ್ಥಾನದ ಹುಂಡಿಗೆ ಹಾಕಿದ ಹಣವನ್ನು ಮನುಷ್ಯರೇ ತೆರೆಯುತ್ತಾರೆ ಎನ್ನುವ ಸಾಮಾನ್ಯ ಪ್ರಜ್ಞೆಯೂ ಇಲ್ಲದ ಅದೆಷ್ಟೋ ಭಕ್ತರು. ದೇವರಿಗೆ ನೋಟಿನಲ್ಲಿ ನಾನಾ ರೀತಿಯ ಬೇಡಿಕೆಗಳನ್ನು ಬರೆದು ಕಾಣಿಕೆ ಹಾಕುತ್ತಿದ್ದಾರೆ.

ಒಟ್ಟಿನಲ್ಲಿ ಈ ನೋಟು ನೋಡಿದ ಬಳಿಕ ಜನರಂತೂ ಸಿಕ್ಕಾಪಟ್ಟೆ ನಕ್ಕು ಸುಸ್ತಾಗಿದ್ದಾರೆ. ಇನ್ನೊಂದೆಡೆ, ನಮ್ಮ ಮನೆಯಲ್ಲೇ ಯಾರ್ಯಾರು ನಮ್ಮ ಸಾವನ್ನು ಬಯಸ್ತಾ ಇದ್ದಾರೋ ಅಂತ ಆತಂಕವೂ ಪಡುವಂತಾಗಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ

Exit mobile version