ಭಟ್ಕಳ: ಅಕ್ರಮವಾಗಿ ಹನುಮಧ್ವಜ ಹಾರಿಸಿದ ಅನಂತ ಕುಮಾರ್ ಹೆಗಡೆ ಸಹಿತ 21 ಜನರ ವಿರುದ್ಧ ಕೇಸ್

ಕಾರವಾರ: ಅಕ್ರಮವಾಗಿ ಸಾವರ್ಕರ್ ನಾಮಫಲಕ ಹಾಗೂ ಹನುಮಾನ್ ಧ್ವಜ ಹಾರಿಸಿದ್ದ ಆರೋಪದಲ್ಲಿ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಸೇರಿದಂತೆ 21 ಜನರ ಮೇಲೆ ಕೇಸ್ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳದಲ್ಲಿ ಅನುಮತಿ ಪಡೆಯದೆ ಕಳೆದ ತಿಂಗಳು ಭಗವಾಧ್ವಜ ಹಾಗೂ ನಾಮಫಲಕ ತೆರವುಗೊಳಿಸಿದ ನಂತರ ಈಗ ಮತ್ತೆ ಧ್ವಜ ಹಾರಿಸಿದ್ದಾರೆ.
ಭಟ್ಕಳದ ತೆಂಗಿನಗುಂಡಿಯ ಬಂದರು ಆವರಣದಲ್ಲಿ ಸಾವರ್ಕರ್ ನಾಮಫಲಕ ಮತ್ತು ಹನುಮಾನ್ ಧ್ವಜವನ್ನು ಬಿಜೆಪಿಯವರು ಹಾರಿಸಿದ್ದರು. ಧ್ವಜವನ್ನುಹಾರಿಸಲು ಸಂಸದ ಅನಂತ್ ಕುಮಾರ್ ಹೆಗಡೆ ಹಾಗೂ ಮಾಜಿ ಶಾಸಕ ಸುನೀಲ್ ನಾಯ್ಕ್ ನೇತೃತ್ವನೀಡಿದ್ದರು.
ಬಿಜೆಪಿಯವರು ಅಳವಡಿಸಿದ ಧ್ವಜ ಹಾಗೂ ನಾಮಫಲಕ ಹೆಬಳೆ ಗ್ರಾಮ ಪಂಚಾಯತ್ ಅಧಿಕಾರಿಗಳು ಧ್ವಜ ತೆರೆವುಗೊಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth