ಬಸ್ ನಿಲ್ದಾಣದಲ್ಲಿ ರಾತ್ರಿ ವಿಶ್ರಾಂತಿ ಪಡೆದ ಧರ್ಮಸ್ಥಳ ಯಾತ್ರಿಕರು!

06/03/2024
ಚಿಕ್ಕಮಗಳೂರು: ರಾಜ್ಯದ ಮೂಲೆ ಮೂಲೆಗಳಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಗೆ ಭಕ್ತರು ಆಗಮಿಸುತ್ತಿದ್ದು, ನೂರಾರು ಭಕ್ತರು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಸ್ ನಿಲ್ದಾಣವನ್ನು ರಾತ್ರಿ ವಿಶ್ರಾಂತಿಗೆ ಬಳಸಿಕೊಂಡರು.
ಹಾಸನ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಕುಣಿಗಲ್, ಬೆಂಗಳೂರು, ಕಡೂರು, ತರೀಕೆರೆ ಭಾಗದ ಭಕ್ತರು ಆಗಮಿಸುತ್ತಿದ್ದಾರೆ.
ಚಾರ್ಮಾಡಿ ಘಾಟ್ ನಲ್ಲಿ ರಾತ್ರಿ ಪಾದಯಾತ್ರೆ ಕಷ್ಟ ಹಿನ್ನೆಲೆಯಲ್ಲಿ ಭಕ್ತರು ಬಸ್ ನಿಲ್ದಾಣವನ್ನು ರಾತ್ರಿ ವಿಶ್ರಾಂತಿಗೆ ಬಳಸಿಕೊಂಡರು.
ಇನ್ನೂ ಹಗಲು ರಾತ್ರಿ ಎನ್ನದೇ ಭಕ್ತರ ದಂಡು ಬರುತ್ತಿದ್ದು, ಶಿವರಾತ್ರಿ ಹಿನ್ನೆಲೆಯಲ್ಲಿ ಧರ್ಮಸ್ಥಳ ಪಾದಯಾತ್ರೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth