3:29 AM Monday 15 - September 2025

70 ಕಿ.ಮೀ.ವರೆಗೆ ಕಾರಿನ ಬಂಪರ್ ನಲ್ಲೇ ಸಿಕ್ಕಿಕೊಂಡಿತ್ತು ನಾಯಿ!

puthur
03/02/2023

ಪುತ್ತೂರಿನ ಕಬಕ ನಿವಾಸಿಗಳು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುತ್ತಿದ್ದ ವೇಳೆ ನಾಯಿಯೊಂದಕ್ಕೆ ಕಾರು ಡಿಕ್ಕಿಯಾಗಿದ್ದು, ನಾಯಿ ಕಾರಿನ ಬಂಪರ್ ನೊಳಗೆ ಸಿಲುಕಿದ್ದು, ಪುತ್ತೂರಿಗೆ ಆಗಮಿಸಿದ ವೇಳೆ ನಾಯಿ ಕಾರಿನಲ್ಲಿ ಸಿಲುಕಿರುವುದು ಬೆಳಕಿಗೆ ಬಂದಿದೆ.

ನಾಯಿಗೆ ಕಾರು ಡಿಕ್ಕಿಯಾದ ವೇಳೆ ತಕ್ಷಣವೇ ಕಾರಿನಿಂದ ಇಳಿದು ನಾಯಿಯನ್ನು ಹುಡುಕಾಡಿದ್ದು, ಆದರೆ, ನಾಯಿಯ ಪತ್ತೆಯೇ ಇರಲಿಲ್ಲ. ನಾಯಿ ಓಡಿ ಹೋಗಿರಬಹುದು ಎಂದು ಕೊಂಡಿದ್ದ ದಂಪತಿ ಕಾರು ಚಲಾಯಿಸಿಕೊಂಡು ಪ್ರಯಾಣ ಮುಂದುವರಿಸಿದ್ದಾರೆ.

ಅಲ್ಲಿಂದ ನೇರವಾಗಿ ಮನೆಗೆ ಬಂದ ಬಳಿಕ ಕಾರನ್ನು ಪರಿಶೀಲನೆ ನಡೆಸಿದ ವೇಳೆ ಕಾರಿನ ಬಂಪರ್ ನ ಗ್ರಿಲ್ ತುಂಡಾಗಿರುವುದು ಗಮನಕ್ಕೆ ಬಂದಿದೆ. ನಾಯಿಯನ್ನು ಹೊರತೆಗೆಯಲು ಪ್ರಯತ್ನಿಸಿದರಾದರೂ, ಹೊರ ತೆಗೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಾರನ್ನು ಗ್ಯಾರೇಜ್ ಗೆ ಕೊಂಡೊಯ್ದು ಹೊರ ತೆಗೆಯಲಾಯಿತು.

ಸುಮಾರು 70 ಕಿ.ಮೀ.ವರೆಗೆ ಬಂಪರ್ ನಲ್ಲಿ ಸಿಲುಕಿದ್ದ ನಾಯಿ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದು, ಈ ಘಟನೆ ಇದೀಗ ಅಚ್ಚರಿಯನ್ನು ಸೃಷ್ಟಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ

Exit mobile version