4:53 AM Wednesday 22 - October 2025

ದುರಸ್ತಿಗಾಗಿ ಕೊಂಡೊಯ್ಯುತ್ತಿದ್ದ ಹೆಲಿಕಾಫ್ಟರ್ ಪತನ!

helicaftar
31/08/2024

ಡೆಹ್ರಾಡೂನ್: ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದ್ದ ಹೆಲಿಕಾಫ್ಟರ್ ನ್ನು ದುರಸ್ತಿಗಾಗಿ ಕೊಂಡೊಯ್ಯಲು ಮತ್ತೊಂದು ಹೆಲಿಕಾಫ್ಟರ್ ಬಂದಿತ್ತು. ಆದರೆ ಹೆಲಿಕಾಫ್ಟರ್ ನ್ನು  ಹೊತ್ತೊಯ್ಯುತ್ತಿದ್ದ ವೇಳೆ ದುರಸ್ತಿಗೀಡಾಗಿದ್ದ ಹೆಲಿಕಾಫ್ಟರ್ ಜಾರಿ ಬಿದ್ದ ಘಟನೆ  ಉತ್ತರಾಖಂಡದ ಕೇದಾರನಾಥದಲ್ಲಿ ನಡೆದಿದೆ.

ಉತ್ತರಾಖಂಡದ ಕೇದಾರನಾಥದಲ್ಲಿ ಲ್ಯಾಂಡಿಂಗ್ ವೇಳೆ ಹೆಲಿಕಾಫ್ಟರ್ ತುರ್ತು ಭೂಸ್ಪರ್ಶ ಮಾಡಿತ್ತು. ಈ ಹೆಲಿಕಾಪ್ಟರ್ ಅನ್ನು ಹೊತ್ತೊಯ್ಯುತ್ತಿದ್ದ ವೇಳೆ ಎಂಐ–17 ಹೆಲಿಕಾಪ್ಟರ್‌ನಿಂದ ಜಾರಿ ಬಿದ್ದು ಮಂದಾಕಿನಿ ನದಿಯ ಬಳಿ ಹೆಲಿಕಾಫ್ಟರ್ ಪತನಗೊಂಡಿದೆ.

ತುರ್ತು ಭೂಸ್ಪರ್ಶ ಮಾಡಿದ್ದ ಹೆಲಿಕಾಪ್ಟರ್ ಅನ್ನು ದುರಸ್ತಿಗಾಗಿ ಗೌಚಾರ್ ಹೆಲಿಪ್ಯಾಡ್‌ ಗೆ ಸಾಗಿಸಲಾಗುತ್ತಿತ್ತು.  ಇದೇ ವೇಳೆ ಟೋಯಿಂಗ್ ಹಗ್ಗ ತುಂಡಾಗಿ ಹೆಲಿಕಾಪ್ಟರ್‌ ಪತನಗೊಂಡಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version