10:15 AM Thursday 21 - August 2025

ದೇವರಮನೆಯಲ್ಲಿ ಮೋಜುಮಸ್ತಿಗೆ ಕಡಿವಾಣ,  ಪ್ರವಾಸಿಗರಿಗೆ ಎಚ್ಚರಿಸಿದ ಪೊಲೀಸರು

devaramane
08/07/2024

ಕೊಟ್ಟಿಗೆಹಾರ: ಬಣಕಲ್ ಸಮೀಪದ ಪ್ರವಾಸಿ ತಾಣ ದೇವರ ಮನೆಯಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯ ಹೆಚ್ಚುತ್ತಿದ್ದು, ಪೊಲೀಸರು ಗಸ್ತು ತಿರುಗಿ ಮೋಜು ಮಸ್ತಿ ಮಾಡುವ ಪ್ರವಾಸಿಗರಿಗೆ ದಂಡದ ಜೊತೆಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಸ್ಥಳಕ್ಕೆ ಬೇಟಿ ನೀಡಿದ್ದ ಸಬ್ ಇನ್ ಸ್ಪೆಕ್ಟರ್ ಡಿ.ವಿ.ರೇಣುಕಾ ಮಾತನಾಡಿ’ ದೇವರಮನೆ ತಾಣ ಭಕ್ತಿಯ ತಾಣವಾಗಿದ್ದು ಇಲ್ಲಿ ಶ್ರೀಕಾಲಭೈರವೇಶ್ವರ ದೇವಸ್ಥಾನವಿದೆ.ಇಲ್ಲಿ ನಿತ್ಯ ಪ್ರವಾಸಿಗರು ಮೋಜು ಮಸ್ತಿ ಮಾಡಿ ಸಂಚಾರ ದಟ್ಟಣೆ ಮಾಡಿ ಜನರಿಗೆ ಕಿರಿಕಿರಿ ತರುವ ಸನ್ನಿವೇಶ ನಿರ್ಮಾಣವಾಗುತ್ತಿದೆ.ವಾರಾಂತ್ಯದಲ್ಲಿ ಅಲ್ಲದೇ ಈಗ ನಿತ್ಯದ ದಿನಗಳಲ್ಲೂ ಪ್ರವಾಸಿಗರು ಅದರಲ್ಲೂ ಯುವಕರು ಮದ್ಯಪಾನ ಮಾಡಿ ಕೂಗಾಡುವ ದೃಶ್ಯ ಕಂಡು ಬರುತ್ತಿದೆ.ಹಾಗಾಗಿ ಸೋಮವಾರ ಸಿಬ್ಬಂದಿಯೊಂದಿಗೆ ದೇವರಮನೆಗೆ ಭೇಟಿ ನೀಡಿ ಮದ್ಯಪಾನ ಮಾಡಿದ ಯುವಕರಿಗೆ ದಂಡ ವಿಧಿಸಿ ಎಚ್ಚರಿಸಲಾಗಿದೆ.

ಪರಿಸರ ಕಲುಷಿತ ಮಾಡುವವರಿಗೆ ಕಡಿವಾಣ ಹಾಕಲಾಗುವುದು. ಪ್ರವಾಸಿಗರು ದೇವಸ್ಥಾನಕ್ಕೆ ಬೇಟಿ ಕೊಟ್ಟು ಪರಿಸರ ಅಸ್ವಾಧನೆ ಮಾಡುವುದು ಒಳಿತು.ಹಾಗಂತ ಮೋಜು ಮಸ್ತಿಗೆ ಅವಕಾಶ ನೀಡುವುದಿಲ್ಲ. ಟ್ರಾಫಿಕ್ ಜಾಮ್ ಮಾಡಿ ಜನರಿಗೆ ತೊಂದರೆ ಕೊಡುವವರಿಗೂ ಲಾಠಿ ರುಚಿ ತೋರಿಸುತ್ತೇವೆ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ಎಂದರು.  ಈ ಸಂದರ್ಭದಲ್ಲಿ ಎಎಸ್ ಐ ಟಿ.ಕೆ.ಶಶಿ, ಪೊಲೀಸ್ ಸಿಬ್ಬಂದಿಗಳಾದ ಅಶೋಕ್, ವರ್ಷಿಣಿ ಇದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version