ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಂಹ, ನರಿ, ಕತ್ತೆಯ ಕಥೆ ವೈರಲ್

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಚಂದಮಾಮ ಕಥೆ ವೈರಲ್ ಆಗುತ್ತಿದೆ. ಸಿಂಹ, ನರಿ ಮತ್ತು ಕತ್ತೆಯ ಕಥೆ ಇದಾಗಿದೆ. ಈ ಕಥೆಯಲ್ಲಿ ಕತ್ತೆಯನ್ನು ಮತದಾರನಿಗೆ ಹೋಲಿಸಿ, ಸಿಂಹ ಮತ್ತು ನರಿಯನ್ನು ರಾಜಕಾರಣಿಗಳಿಗೆ ಹೋಲಿಸಲಾಗಿದೆ.
ವೈರಲ್ ಆಗುತ್ತಿರುವ ಕಥೆಯನ್ನು ಯಥಾವತ್ತಾಗಿ ಇಲ್ಲಿ ನೀಡಲಾಗಿದೆ:
ಒಮ್ಮೆ ಸಿಂಹಕ್ಕೆ ಜೋರಾಗಿ ಹಸಿವೆಯಾಯ್ತು, ಪಕ್ಕದಲ್ಲಿದ್ದ ನರಿಯೊಂದಿಗೆ ಹೇಳಿತು:
“ನನಗೇನಾದರು ತಿನ್ನಲು ತಂದು ಕೊಡು, ಇಲ್ಲದಿದ್ದರೆ ನಾನು ನಿನ್ನನ್ನು ಕೊಂದು ತಿನ್ನುತ್ತೇನೆ.”
ನರಿ ನೇರ ಒಂದು ಕತ್ತೆಯ ಬಳಿ ಹೋಗಿ ಹೇಳಿತು:
“ಸಿಂಹ ನಿನ್ನನ್ನು ರಾಜನನ್ನಾಗಿ ಮಾಡ್ತಾನಂತೆ,ಬಾ ನನ್ನ ಜೊತೆ.”
ಕತ್ತೆಯನ್ನು ಕಂಡಾಗ ಸಿಂಹ ಅದರ ಮೇಲೆ ಆಕ್ರಮಿಸಿತು, ಕಿವಿಯನ್ನು ಕಚ್ಚಿ ಕತ್ತರಿಸಿತು, ಆದರೆ ಕತ್ತೆ ಹೇಗೋ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಯಿತು…
ಕತ್ತೆ ನರಿಯೊಂದಿಗೆ ಕೇಳಿತು, “ನೀನು ನನಗೆ ಮೋಸ ಮಾಡಿ ಬಿಟ್ಟೆ ಅಲ್ವಾ?…! ”
ನರಿ ಹೇಳಿತು: “ಮುಠ್ಠಾಳನಂತೆ ಮಾತಾಡ್ಬೇಡ, ನಿನ್ನ ತಲೆಗೆ ಕಿರೀಟ ತೊಡಿಸಲು ನಿನ್ನ ಕಿವಿಯನ್ನು ಕತ್ತರಿಸಿದ್ದು.”‘
ಕತ್ತೆ ಅದು ಸತ್ಯವಾಗಿರಬಹುದು ಎಂದು ಭಾವಿಸಿ ಮತ್ತೆ ಸಿಂಹದ ಬಳಿ ಹೋಯಿತು…
ಸಿಂಹ ಪುನಃ ಕತ್ತೆಯನ್ನು ಆಕ್ರಮಿಸಿ ಕಚ್ಚಿ ಬಾಲವನ್ನು ಕತ್ತರಿಸಿ ಹಾಕಿತು..!,
ಕತ್ತೆ ಮತ್ತೊಮ್ಮೆ ಪಾರಾಗಿ ಹೋಗಿ ನರಿಯೊಂದಿಗೆ ಕೇಳಿತು “ನೀನು ನನ್ನಲ್ಲಿ ಸುಳ್ಳು ಹೇಳಿದ್ದಲ್ವಾ?!…
ನರಿ ಹೇಳಿತು: “ಅಯ್ಯೋ ಪೆದ್ದುಮುಂಡೇದು, ನಿನಗೆ ಸಿಂಹಾಸನದಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಬೇಕಾಗಿ ತಾನೇ ನಿನ್ನ ಬಾಲವನ್ನು ಕತ್ತರಿಸಿದ್ದು”…
ಕತ್ತೆ ವಾಪಸ್ ಸಿಂಹದ ಬಳಿ ಹೋಗುವಂತೆ ಮನವೊಲಿಸಿತು ನರಿ…
ಈಗ ಸಿಂಹ ಕತ್ತೆಯನ್ನು ಹಿಡಿದು ಕೊಂದು ಹಾಕಿತು…!
ಸಿಂಹ ನರಿಯೊಂದಿಗೆ ಹೇಳಿತು: “ನೀನು ಒಳ್ಳೆಯ ಕೆಲಸ ಮಾಡಿದೆ, ವೆಲ್ ಡನ್, ಇನ್ನು ಹೋಗಿ ಇದರ ಚರ್ಮ ಸುಲಿದು ತಾ…
ನರಿ ಕತ್ತೆಯ ಚರ್ಮ ಸುಲಿದು,,,ಕತ್ತೆಯ ಮೆದುಳನ್ನು ತಿಂದು ಅದರ ಹೃದಯ, ಕರುಳು, ಶ್ವಾಸಕೋಶವನ್ನು ಸಿಂಹದ ಮುಂದೆ ತಂದಿಟ್ಟಿತು…
ಸಿಂಹ ಕೋಪದಿಂದ ಕೇಳಿತು,: “ಇದರ ಮೆದುಳು ಎಲ್ಲಿ…?”
ನರಿ ಉತ್ತರಿಸಿತು: “ಅದಕ್ಕೆ ಮೆದುಳು ಎಂಬುದು ಇರಲಿಲ್ಲ ಪ್ರಭು…,ಅದು ಇದ್ದಿದ್ದರೆ ಕಿವಿ ಬಾಲ ಕಚ್ಚಿ ಕತ್ತರಿಸಿದ ನಂತರವೂ ನಿಮ್ಮ ಬಳಿ ವಾಪಸ್ ಬರ್ತಿತ್ತಾ???…!!!
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth