ಲಾಡ್ಜ್ ನಿಂದ ಕದ್ದು, ಸಿಸಿ ಕ್ಯಾಮರಾ ಮುಂದೆ ಡಾನ್ಸ್ ಮಾಡಿದ ಕಳ್ಳ!

chikamaglore 1
27/06/2024

ಚಿಕ್ಕಮಗಳೂರು: ಲಾಡ್ಜನಲ್ಲಿದ್ದ ಗ್ರಾಹಕರ ಮಾಹಿತಿ ಒಳಗೊಂಡಿದ್ದ ಲೆಡ್ಜರ್ ಕದ್ದ ಕಳ್ಳ, ಸಿಸಿಟಿವಿ ಎದುರು ಡ್ಯಾನ್ಸ್ ಮಾಡಿದ ಘಟನೆ ಶೃಂಗೇರಿ ಪಟ್ಟಣದ ಲಾಡ್ಜ್ ನಲ್ಲಿ ನಡೆದಿದೆ.

ಲಾಡ್ಜ್ ನಲ್ಲಿ ಹಣ, ಟಿವಿ, ಎಲ್ಲವೂ ಇದ್ದರೂ ಕೇವಲ ಲೆಡ್ಜರ್ ಮಾತ್ರ ಕದ್ದು ಪರಾರಿಯಾಗಿದ್ದಾರೆ. ಉದ್ದೇಶ ಪೂರ್ವಕವಾಗಿ ಲೆಡ್ಜರ್ ಬುಕ್ ಮಾತ್ರ ಕಳ್ಳರು ಹೊತ್ತೊಯ್ದಿದ್ದಾರೆ. ಯಾವುದಾದರೂ ಕ್ರೈಂ ಹಿಸ್ಟರಿ ಮುಚ್ಚಿ ಹಾಕುವ ಉದ್ದೇಶವೇ…? ಅಥವಾ ಸೈಬರ್ ಸ್ಕ್ಯಾಮ್ ಗೆ ಡಾಟಾ ದುರ್ಬಳಕೆಗಾ…?ಎನ್ನುವ ಅನುಮಾನ ಕೇಳಿ ಬಂದಿದೆ.

ಒಂದೇ ದಿನ ಹಲವು ಲಾಡ್ಜ್ ಗಳಲ್ಲಿ ಕೇವಲ ಲೆಡ್ಜರ್ ಮಾತ್ರ ಕದ್ದ ಕಳ್ಳರು ಪರಾರಿಯಾಗಿದ್ದಾರೆ. ಶೃಂಗೇರಿ ಪಟ್ಟಣದಲ್ಲಿ ಮೂರು ದಿನದ ಹಿಂದೆ ಈ ಘಟನೆ ನಡೆದಿದೆ.
ಲೆಡ್ಜರ್ ಮಾತ್ರ ಕದ್ದ ಕಳ್ಳ ಕಳ್ಳ ಸಿಸಿ ಕ್ಯಾಮರಾ ಎದುರು ಡ್ಯಾನ್ಸ್ ಮಾಡಿ ಹೋಗಿದ್ದು, ನನ್ನನ್ನ ಯಾರೂ ಹಿಡಿಯಲಾಗದು, ಏನೂ ಮಾಡಲಾಗದು ಅನ್ನೋ ಅಂಹಕಾರದ ವರ್ತನೆಯೇ ಎನ್ನುವ ಅನುಮಾನ ಕೇಳಿ ಬಂದಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version