9:38 AM Wednesday 27 - August 2025

ಇದು ಬುರುಡೆ ಬಜೆಟ್, ರಾಜ್ಯಕ್ಕೆ ಮಾಡಿದ ಅನ್ಯಾಯ: ವಾಟಾಳ್ ನಾಗರಾಜ್

vatal nagaraj
17/02/2023

ಚಾಮರಾಜನಗರ: ಇದು ರಾಜ್ಯಕ್ಕೆ ಕೊಟ್ಟ ಬುರುಡೆ ಬಜೆಟ್,  ಈ ಬಜೆಟ್ ರಾಜ್ಯಕ್ಕೆ ಮಾಡಿದ ಅನ್ಯಾಯ. ಎಂದು ಚಾಮರಾಜನಗರದಲ್ಲಿ ಕನ್ನಡ ಚಳವಳಿಗಾರರ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.

ಇನ್ನು ಹದಿನೈದು ಇಪ್ಪತ್ತು ದಿನದಲ್ಲಿ ಇವರಿಗೆ ಅಧಿಕಾರನೇ ಇರುವುದಿಲ್ಲ. ಈ ಬಜೆಟ್ ಬಗ್ಗೆ ‌ಚರ್ಚೆಯಾಗಿ ಜಿಲ್ಲೆಗಳಿಗೆ ಪತ್ರಿ ತಲುಪಲು ಎರಡು ತಿಂಗಳು ಬೇಕು. ಇದರ ಬದಲು ವಸ್ತುಸ್ಥಿತಿಯ ಬಜೆಟ್ ‌ಮಾಡಬೇಕಿತ್ತು. ಇವರ ಅವಧಿಯಲ್ಲಿ ಎಷ್ಟು ದುಡ್ಡು ಖರ್ಚು‌ ಮಾಡಲು ಸಾಧ್ಯ ಅದನ್ನ ಮಾಡಬೇಕಿತ್ತು ಎಂದರು.

ರಾಜ್ಯದ ಜನತೆ ಈ ಬಜೆಟ್ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಇದು ಒಂದು ಬುರುಡೆ ಬಜೆಟ್ ಆಗಿದೆ. ಚಾಮರಾಜನಗರ ಜಿಲ್ಲೆ ಇದೆಯೇ ಎಂಬುದೇ ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ. ಜಿಲ್ಲೆಗೆ ಒಂದು ಬುಡಗಸು‌ ಸಹ ಕೊಡುತ್ತಿಲ್ಲ, ನಾನು ಇದ್ದಾಗ ಆದ ಕೆಲಸ ಮಾತ್ರ ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರು ಅತ್ತೆ ಮನೆಗೆ ಬರುವ ರೀತಿ ಬಂದು ಹೋಗುತ್ತಾರೆ.  ಅವರು ಜಿಲ್ಲೆಗೆ ಬರುವುದು ಜಿಲ್ಲಾ ಅಭಿವೃದ್ಧಿಗೆ ಅಲ್ಲ, ಅವರು ಬರುವುದೇ ಬೇರೆ ಕೆಲಸಕ್ಕೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version