ಈ ಬಾರಿ ಮೈಸೂರು ದಸರಾ ಉದ್ಘಾಟಿಸಲಿದ್ದಾರೆ ನಾದಭೀಮ ಹಂಸಲೇಖ
29/08/2023
ಈ ಬಾರಿ ಮೈಸೂರು ದಸರಾವನ್ನು “ನಾದಭೀಮ” ಹಂಸಲೇಖ ಅವರು ಉದ್ಘಾಟಿಸಲಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದು, ಈ ಬಾರಿ ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ ಅವರು ಮೈಸೂರು ದಸರವನ್ನು ಉದ್ಘಾಟಿಸಲಿದ್ದಾರೆ ಅಂತ ತಿಳಿಸಿದ್ದಾರೆ.
ನಾಡಿನ ಹಿರಿಯ ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ ಅವರು ಈ ಬಾರಿ ಮೈಸೂರು ದಸರಾವನ್ನು ಉದ್ಘಾಟಿಸಲಿದ್ದು, ಈ ಮೂಲಕ ಹಂಸಲೇಖ ಅವರಿಗೆ ರಾಜ್ಯ ಸರ್ಕಾರ ವಿಶೇಷ ಗೌರವ ಸಲ್ಲಿಸಿದೆ.
ಇನ್ನೂ ಹಂಸಲೇಖ ಅವರು ನೂರಾರು ಸಂಗೀತ ವಿದ್ವಂಸರನ್ನು ಸೃಷ್ಟಿಸಿದ ನಾದಬ್ರಹ್ಮರಾಗಿದ್ದಾರೆ. ಅವರಿಗೆ ನಾದಭೀಮ ಎನ್ನುವ ಇನ್ನೊಂದು ಬಿರುದು ಕೂಡ ಇದೆ. ಇದು ಜನರೇ ನೀಡಿದ ಬಿರುದಾಗಿದೆ. ಖ್ಯಾತ ಚಿತ್ರಗಳ ಹಾಡುಗಳು ಮಾತ್ರವಲ್ಲದೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮೇಲಿನ ಅವರ ಪ್ರೀತಿ, ಅವರ ಹಾಡುಗಳಲ್ಲಿ ಕೂಡ ಮೂಡಿ ಬಂದಿವೆ.

























