ದೇಶದ ಅತ್ಯಂತ ಕಿರಿಯ ಸಂಸದರನ್ನು ಪರಿಚಯಿಸಿದ ಈ ಸಲದ ಲೋಕಸಭಾ ಚುನಾವಣೆ

04/06/2024

ಉತ್ತರ ಬಿಹಾರದ ಸಮಸ್ತಿಪುರ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ 25 ವರ್ಷ ಶಾಂಭವಿ ಚೌಧರಿ ಗೆಲುವು ಸಾಧಿಸಿದ್ದಾರೆ. ಸಚಿವ ಈಶ್ವರ್​ ಖಂಡ್ರೆ ಪುತ್ರ 26 ವರ್ಷದ ಸಾಗರ ಖಂಡ್ರೆ ಬೀದರ್​ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲವು ಸಾಧಿಸಿದ್ದಾರೆ. ಈ ಮೂಲಕ ಇವರಿಬ್ಬರು ದೇಶದ ಅತ್ಯಂತ ಕಿರಿಯ ಸಂಸದರಾಗಿ ಹೊರಹೊಮ್ಮಿದ್ದು, ಇತಿಹಾಸ ಸೃಷ್ಟಿಸಿದ್ದಾರೆ.

ಬೀದರ ನಲ್ಲಿ ಸಾಗರ ಖಂಡ್ರೆಯ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಯ ಘಟಾನುಘಟಿ ನಾಯಕ ಕೇಂದ್ರ ಸಚಿವ ಭಗವಂತ ಖೂಬಾ ಸೋಲುಂಡಿದ್ದಾರೆ. 26 ವರ್ಷದ ಸಾಗರ ಖಂಡ್ರೆ ಸಂಸತ್ತು ಪ್ರವೇಶಿಸಿದ ಕರ್ನಾಟಕದ ಅತ್ಯಂತ ಕಿರಿಯ ವಯಸ್ಸಿನ ಸಂಸದರಾಗಿದ್ದಾರೆ.

ಲೋಕಸಭೆ ಚುನಾವಣೆ ಪ್ರಚಾರದ ವೇಳೆ ವಿಪಕ್ಷ ನಾಯಕ ಆರ್​. ಅಶೋಕ್​ ಸಾಗರ್ ಖಂಡ್ರೆ ವಿರುದ್ಧ ಸಾಗರ ಖಂಡ್ರೆ ಒಬ್ಬ ಅನುಭವ ಇಲ್ಲದ ಹುಡುಗ, ಆತ ಗೆದ್ದರೆ ಸಂಸತ್‌ಗೆ ಸ್ಕೂಲ್ ಬ್ಯಾಗ್, ಬುಕ್ ಹಿಡಿದು ಕರೆದುಕೊಂಡು ಹೋಗಲು ಒಬ್ಬರು ಬೇಕು ಎಂದು ವ್ಯಂಗ್ಯ ವಾಡಿದ್ದರು. ಆದರೆ ಸಾಗರ ಖಂಡ್ರೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ತಾನೊಬ್ಬ ಪ್ರಭುದ್ಧ ಎಂದು ಟಾಂಗ್​ ಕೊಟ್ಟಿದ್ದಾರೆ.

ಮತ್ತೋರ್ವ ಕಿರಿಯ ಸಂಸದೆ ಜೆಡಿಯು ಸಚಿವ ಅಶೋಕ್ ಕುಮಾರ್ ಚೌಧರಿಯವರ ಪುತ್ರಿ ಶಾಂಭವಿ ಚೌಧರಿ ಲೋಕ ಜನಶಕ್ತಿ ಪಕ್ಷ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಅವರು ತಮ್ಮ ಪ್ರತಿಸ್ಪರ್ಧಿ ಸನ್ನಿ ಹಜಾರಿ ವಿರುದ್ಧ ಸುಮಾರು ಒಂದು ಲಕ್ಷ ಮತಗಳ ಅಂತರದಿಂಧ ಗೆಲುವು ಸಾಧಿಸಿದ್ದಾರೆ. .
ಶಾಂಭವಿ ಮಾಜಿ ಐಪಿಎಸ್ ಅಧಿಕಾರಿ ಕಿಶೋರ್ ಕುನಾಲ್ ರ ಸೊಸೆಯಾಗಿದ್ದಾರೆ. ಕುನಾಲ್ ಅಯೋಧ್ಯೆ ರಾಮ ಮಂದಿರ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡ ಶಾಂಭವಿ ಪರವಾಗಿ ಪ್ರಚಾರ ಮಾಡಿದ್ದರು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ

Exit mobile version