12:57 AM Saturday 23 - August 2025

ಉಲ್ಟಾ ಹೊಡೆದ ‘ಸತ್ಯನಾರಾಯಣ ಪೂಜೆ’ ಅರ್ಚಕನ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿತ!

sathyanarayana puje
04/10/2022

ಮಧ್ಯಪ್ರದೇಶ: ಆ ಕುಟುಂಬ ಸಾಕಷ್ಟು ಹಣ ಖರ್ಚು ಮಾಡಿ ಸತ್ಯನಾರಾಯಣ ಪೂಜೆ(Satyanarayan Puja) ಮಾಡಿಸಿತ್ತು. ಆದ್ರೆ ಪೂಜೆ ಮಾಡಿದರೂ ನಿರೀಕ್ಷಿತ ಫಲ ಸಿಗದೇ ಇದ್ದಾಗ ಪೂಜೆ ಮಾಡಿದ ಅರ್ಚಕನ ವಿರುದ್ಧ ಕುಟುಂಬ ಸಿಡಿದೆದ್ದಿತ್ತು.

ಹೌದು..! ಮಧ್ಯಪ್ರದೇಶದ  ಇಂದೂರ್ ನಲ್ಲಿ ಕುಟುಂಬವೊಂದರ, ತಂದೆ ಹಾಗೂ ಇಬ್ಬರು ಪುತ್ರರು ಸೇರಿ ಅರ್ಚಕನೋರ್ವನಿಗೆ ಹಿಗ್ಗಾಮುಗ್ಗಾ ಗೂಸಾ ನೀಡಿದ ಘಟನೆ ನಡೆದಿದ್ದು, ಅರ್ಚಕ ಸರಿಯಾಗಿ ಪೂಜೆ ಮಾಡಿಲ್ಲ, ಅರ್ಚಕ ಪೂಜೆ ಮಾಡಿದ ಬಳಿಕ ನಮ್ಮ ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ. ಅರ್ಚಕ ಸತ್ಯನಾರಾಯಣ ಪೂಜೆಯಲ್ಲಿ ಲೋಪ ಎಸಗಿದ ಪರಿಣಾಮ ನಮ್ಮ ಆಕಾಂಕ್ಷೇ ಈಡೇರದೇ ಕುಟುಂಬಕ್ಕೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಹಲ್ಲೆಯ ಬಳಿಕ ಕುಟುಂಬಸ್ಥರು ದೂರಿದ್ದಾರೆ.

ರಾಜಸ್ಥಾನದ ಕೋಟಾ ನಿವಾಸಿಯಾಗಿರುವ ಕುಂಜ್‌ ಬಿಹಾರಿ ಶರ್ಮಾ ಹಲ್ಲೆಗೊಳಗಾಗಿರುವ ಅರ್ಚಕನಾಗಿದ್ದು, ಲಕ್ಷ್ಮೀಕಾಂತ್ ಶರ್ಮಾ ಮತ್ತು ಆತನ ಮಕ್ಕಳಾದ ವಿಪುಲ್ ಮತ್ತು ಅರುಣ್ ಎಂಬವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಲು ಇವರನ್ನು ಆಹ್ವಾನಿಸಲಾಗಿತ್ತು.

ಸತ್ಯನಾರಾಯಣ ಪೂಜೆ ಮುಗಿದ ಬಳಿಕ ಅರ್ಚಕ ಕುಂಜ್‌ ಬಿಹಾರಿ ಶರ್ಮಾ ತಮ್ಮ ಮನೆಗೆ ತೆರಳಿದ್ದರು. ಇತ್ತ ಪೂಜೆ ಮುಗಿದ ಬಳಿಕ ಲಕ್ಷ್ಮೀಕಾಂತ್ ಶರ್ಮಾನ ಓರ್ವ ಪುತ್ರ ಅರುಣ್ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದ. ಹೀಗಾಗಿ ಸ್ವತಃ ಅರ್ಚಕನಾಗಿರುವ ಲಕ್ಷ್ಮೀಕಾಂತ್ ಶರ್ಮಾ, ತಾವು ಪೂಜೆಗಾಗಿ ಕರೆಸಿದ್ದ ಅರ್ಚಕ ಕುಂಜ್‌ ಬಿಹಾರಿ ಶರ್ಮಾ ಸರಿಯಾಗಿ ಪೂಜೆ ಮಾಡಿಲ್ಲ. ಹೀಗಾಗಿ ಈ ಸಮಸ್ಯೆ ಶುರುವಾಗಿದೆ ಎಂದು ಆಕ್ರೋಶಗೊಂಡಿದ್ದು, ರಾತ್ರೋರಾತ್ರಿ ತಂದೆ ಮಕ್ಕಳು ಸೇರಿ ಅರ್ಚಕನ ಮನೆಗೆ ದಾಳಿ ಮಾಡಿದ್ದು, ಅರ್ಚಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರಲ್ಲದೇ ಅರ್ಚಕನ ಕಿವಿಗೆ ಕಚ್ಚಿ ಗಾಯಗೊಳಿಸಿದ್ದಾರೆ.

ಈ ವೇಳೆ ಸ್ಥಳೀಯರು ಅರ್ಚಕನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಇನ್ನೂ ಸ್ಥಳೀಯರು ಹೇಳುವಂತೆ, ಅರುಣ್ ಗೆ ಮದುವೆಗೆ ಸೂಕ್ತ ಹೊಂದಾಣಿಕೆಯಾಗದ ಕಾರಣ ಪೂಜೆ ನಡೆಸಲಾಗಿತ್ತು. ಆದರೆ ಪೂಜೆಯ ಬಳಿಕ ಆತ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದ ಎಂದು ಸ್ಥಳೀಯರು ವ್ಯಂಗ್ಯವಾಡಿದ್ದಾರೆ .

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version