12:31 PM Saturday 23 - August 2025

ಮುಗಳಖೋಡ: ಮೊಬೈಲ್ ಅಂಗಡಿಯಲ್ಲಿ  ಕಳವು ಪ್ರಕರಣದ ಮೂವರು ಆರೋಪಿಗಳ ಬಂಧನ

belagavi
25/06/2024

ಮುಗಳಖೋಡ: ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮುಗಳಖೋಡ ಪಟ್ಟಣದಲ್ಲಿ ಗುರುವಾರ ಜೂ.20 ತಡರಾತ್ರಿ  ಪಟ್ಟಣದ ಮಲ್ಲಿಕಾರ್ಜುನ ಕಮ್ಯುನಿಕೇಶನ್ ಅಂಗಡಿ ಬೀಗ ಒಡೆದು ಸ್ಯಾಮ್ಸಂಗ್ ಎಸ್ 24 ಅಲ್ಟ್ರಾ ಮೊಬೈಲ್  ಸೇರಿದಂತೆ ಒಟ್ಟು 07 ವಿವಿಧ ಕಂಪನಿಯ ಅಂದಾಜು 2.84 ಲಕ್ಷ ರೂಗಳ ಮೊಬೈಲ್ ಗಳನ್ನು ಕಳವು ಮಾಡಿದ  ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೂಡಲಗಿ ಪಟ್ಟಣದ ಸುಭಾಷ ಅರ್ಜುನ ಹೊಸಕೋಟಿ, ಹಾರೂಗೇರಿ ಪಟ್ಟಣದ ಹನುಮಂತ ಲಕ್ಕಪ್ಪ ಕುರಣಿ ಹಾಗೂ ಶಾಂತಿ ಸಾಗರ್ ಅಲಿಯಾಸ್ ಶಾಂತು ಅಲ್ಲಪ್ಪ ಕುರಣಿ ಮೊಬೈಲುಗಳ ಕದ್ದ ಆರೋಪಿಗಳು. ಆರೋಪಿತರು ಈ ಹಿಂದೆ ಹಾರೂಗೇರಿ ಪಟ್ಟಣದ ಕೆನರಾ ಬ್ಯಾಂಕ್ ಸಹಕಳ್ಳತನ ಮಾಡಲು ಯತ್ನಿಸಿದ್ದರು ಎಂದು ತನಿಖೆಗಳಿಂದ ತಿಳಿದು ಬಂದಿದೆ ಎಂದು ಸಿಪಿಐ ಡಿ.ರವಿಚಂದ್ರನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಳಗಾವಿ ಎಸ್‌.ಪಿ.  ಡಾ.ಭೀಮಾಶಂಕರ ಗುಳೇದ ಮಾರ್ಗದರ್ಶನದಲ್ಲಿ ಅಡಿಷನಲ್ ಎಸ್ಪಿ ಕು.ಶೃತಿ ಎನ್.ಎಸ್,  ಅಡಿಷನಲ್ ಎಸ್‌.ಪಿ. ಆರ್.ಬಿ.ಬಸರಗಿ, ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ ಅವರುಗಳ ಮಾರ್ಗದರ್ಶನದಂತೆ ಸಿಪಿಐ ಡಿ.ಬಿ.ರವಿಚಂದ್ರನ್, ಪಿಎಸ್ ಐ ಗಿರಿಮಲ್ಲಪ್ಪ ಉಪ್ಪಾರ ಹಾಗೂ ಸಿಬ್ಬಂದಿಗಳು ತಂಡ ರಚನೆ ಮಾಡಿ ಪ್ರಕರಣವು ದಾಖಲಾದ ಎರಡೇ ದಿನದಲ್ಲಿ ಪ್ರಕರಣವನ್ನು ಭೇದಿಸಿ ಎರಡು ಜನ ಆರೋಪಿತರನ್ನು ಬಂಧಿಸಿ, ಬಂಧಿತ ಆರೋಪಿಗಳಿಂದ ಅಂದಾಜು 2.84 ಲಕ್ಷ ರೂಪಾಯಿಗಳ ಮೌಲ್ಯದ 07 ಆಂಡ್ರಾಯ್ಡ್ ಮೊಬೈಲ್ ಗಳನ್ನು ವಶಪಡಿಕೊಂಡಿರುತ್ತಾರೆ.

ತನಿಖಾ ತಂಡದ ನೇತೃತ್ವವನ್ನು ವೃತ್ತ ನಿರೀಕ್ಷಕ ಡಿ.ಬಿ.ರವಿಚಂದ್ರನ್, ಠಾಣಾ ಪಿಎಸ್ ಐ ಗಿರಿಮಲ್ಲಪ್ಪ ಉಪ್ಪಾರ ವಹಿಸಿದ್ದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಬಿ.ಎಲ್.ಹೊಸಟ್ಟಿ, ರಮೇಶ ಮುಂದಿನಮನಿ, ಎ.ಎಸ್.ಶ್ಯಾಂಡಗೆ, ಎಚ್.ಆರ್.ಅಂಬಿ, ಸುರೇಶ ಲೋಕುರೆ, ಪಿ.ಎಂ.ಸಪ್ತಸಾಗರ, ವಿನೋದ ತಕ್ಕಣ್ಣವರ, ವ್ಹಿ.ಪಿ.ದೊಡಮನಿ, ತಂಡದಲ್ಲಿ ಕಾರ್ಯನಿರ್ವಹಿಸಿದ ಎಲ್ಲರನ್ನು ಎಸ್ಪಿ ಡಾಕ್ಟರ್. ಭೀಮಾಶಂಕರ ಗುಳೇದ ಶ್ಲಾಘಿಸಿದ್ದಾರೆ.

  • ಸಂತೋಷ ಮುಗಳಿ

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version