4:42 AM Thursday 29 - January 2026

ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಬೇಸತ್ತು ಯುವಕ ಸಾವಿಗೆ ಶರಣು!

ganapati gaokar
29/06/2023

ಯಲ್ಲಾಪುರ:  ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಬೇಸತ್ತ ಯುವಕನೋರ್ವ ಸಾವಿಗೆ ಶರಣಾದ ಘಟನೆ  ತಾಲೂಕಿನ ತೇಲಂಗಾರ ಸಮೀಪದ ಕಿರಗಾರಿಮನೆ ಬಳಿ ಬುಧವಾರ ನಡೆದಿದೆ.

ಕಿರಿಗಾರಿ ಮನೆಯ ನಾಗರಾಜ ಗಣಪತಿ ಗಾಂವ್ಕರ(35) ಸಾವಿಗೆ ಶರಣಾದ ಯುವಕನಾಗಿದ್ದು, ಈತ ಕೃಷಿ ಮಾಡಿಕೊಂಡಿದ್ದು, ಮದುವೆಯಾಗಲು ಮುಂದಾಗಿದ್ದರೂ ಹೆಣ್ಣು ಸಿಗುತ್ತಿಲ್ಲ ಎಂದು ನೊಂದಿದ್ದ ಎನ್ನಲಾಗಿದೆ.

ಹವ್ಯಕ ಸಮುದಾಯದ ಯುವಕರು ಹೆಣ್ಣು ಸಿಗದೇ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ಕೃಷಿಕರಿಗಂತೂ ಹೆಣ್ಣು ಕೊಡುವವರೇ ಇಲ್ಲ ಎಂಬಂತಾಗಿದೆ. ಇದೀಗ ಹೆಣ್ಣು ಸಿಗದೇ ನೊಂದಿದ್ದ ಯುವಕ ಸಾವಿಗೆ ಶರಣಾಗಿದ್ದಾನೆ.

ಯುವಕ ಮರವೊಂದಕ್ಕೆ ನೇಣು ಬಿಗಿದು ಸಾವಿಗೆ ಶರಣಾಗಿದ್ದು, ಘಟನಾ ಸ್ಥಳಕ್ಕೆ  ಯಲ್ಲಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version