ದೀದಿ ವಿರುದ್ಧ ನಮೋ ಕೆಂಗಣ್ಣು: ಹಿಂದೂಗಳನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡಿದ್ದು ಯಾರು..?

ಮಮತಾ ಬ್ಯಾನರ್ಜಿ ಅವರ ಆಡಳಿತವು ಪಶ್ಚಿಮ ಬಂಗಾಳದಲ್ಲಿ ಹಿಂದೂಗಳನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾರ್ಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಈ ಮೂಲಕ ಮತ್ತೆ ಹಿಂದೂಗಳು, ಹಿಂದೂ ಧರ್ಮ ಹಿಂದೂಗಳ ಮೇಲೆ ದೌರ್ಜನ್ಯ ಇತ್ಯಾದಿ ಧರ್ಮ ಕೇಂದ್ರಿತ ವಿಷಯಗಳ ಮೇಲೆಯೇ ತನ್ನ ಚುನಾವಣಾ ಪ್ರಚಾರ ಭಾಷಣವನ್ನು ಮುಂದುವರಿಸಿದ್ದಾರೆ.
ಯಾವ ಕಾರಣಕ್ಕೆ ಹಿಂದೂಗಳು ಪಶ್ಚಿಮ ಬಂಗಾಳದಲ್ಲಿ ಎರಡನೇ ದರ್ಜೆಯ ನಾಗರಿಕರಾಗಿ ಮಾರ್ಪಟ್ಟಿದ್ದಾರೆ..? ಹಿಂದೂಗಳನ್ನು ಭಾಗಿರಥಿ ನದಿಗೆ ಎಸೆಯಬೇಕೆಂದು ಇತ್ತೀಚಿಗೆ ಟಿಎಂಸಿ ಎಮ್ಎಲ್ಎ ಹೇಳಿದ್ರು. ಇದು ಯಾವ ಬಗೆಯ ರಾಜಕೀಯ? ತೃಣಮೂಲ ಕಾಂಗ್ರೆಸ್ಸಿಗೆ ಮನುಷ್ಯತ್ವಕ್ಕಿಂತ ಹೆಚ್ಚು ಓಲೈಕೆ ಮುಖ್ಯವೋ ಎಂದು ಮೋದಿ ಮುಸ್ಲಿಮರ ಹೆಸರನ್ನು ಎತ್ತದೆ ಪ್ರಶ್ನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth