ಜಮ್ಮು ಕಾಶ್ಮೀರ ಪೊಲೀಸರ ಕಾರ್ಯಾಚರಣೆ: ಎಲ್ ಇಟಿ ಉಗ್ರರ ಸಹಚರರು ಅಂದರ್
18/08/2023
ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾದ (ಎಲ್ ಇಟಿ) ಇಬ್ಬರು ಸಹಚರರನ್ನು ಜಮ್ಮು-ಕಾಶ್ಮೀರದ ಪೊಲೀಸರು ಬಂಧಿಸಿದ್ದಾರೆ. ಜಮ್ಮು-ಕಾಶ್ಮೀರ ಸೋಪೋರ್ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಈ ಇಬ್ಬರು ಎಲ್ ಇಟಿ ಉಗ್ರರ ಸಹಚರರು ಸಿಕ್ಕಿಬಿದ್ದಿದ್ದಾರೆ.
ಇವರಿಂದ 8 ಪಿಸ್ತೂಲ್ ಮತ್ತು ಗ್ರೆನೇಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಎಫ್‌ಐಆರ್ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಸೋಪೋರ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ, ಕುಲ್ಗಾಮ್ ಜಿಲ್ಲೆಯಲ್ಲಿ ಮೂವರು ಉಗ್ರರನ್ನು ಬಂಧಿಸಿದ್ದರು.
ದಕ್ಷಿಣ ಕಾಶ್ಮೀರದಿಂದ ಕಳೆದ ಮೂರು ದಿನಗಳಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ನ ಇಬ್ಬರು ಮತ್ತು ಹಿಜ್ಬುಲ್ ಮುಜಾಹೀನ್‌ನ ಒಬ್ಬನನ್ನು ಭದ್ರತಾ ಪಡೆ ಬಂಧಿಸಿತ್ತು. ಬಂಧಿತರನ್ನು ಖುರ್ಷೀದ್ ಅಹ್ಮದ್ ದಾರ್ ಮತ್ತು ಹಾಜಿಕ್ ರಾಥರ್ ಎಂದು ಗುರುತಿಸಲಾಗಿದೆ. ಅವರಿಂದ ಒಂದು ಪಿಸ್ತೂಲ್, ಕೆಲವು ಮದ್ದುಗುಂಡುಗಳು ಮತ್ತು ಜೀವಂತ ಗ್ರೆನೆಡ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.
























