10:31 AM Wednesday 20 - August 2025

ಟೋಲ್ ಪ್ಲಾಜಾ ಸಿಬ್ಬಂದಿಯೊಂದಿಗೆ ಹೊಡೆದಾಟಕ್ಕೆ ನಿಂತ ‘ದಿ ಗ್ರೇಟ್ ಖಲಿ’

kalli
13/07/2022

ಪಂಜಾಬ್‌: WWE ಸೂಪರ್ ಸ್ಟಾರ್ ‘ದಿ ಗ್ರೇಟ್ ಖಲಿ’ ಮತ್ತು ಟೋಲ್ ಪ್ಲಾಜಾದ ಉದ್ಯೋಗಿಗಳ ನಡುವೆ ಪರಸ್ಪರ ವಾಗ್ವಾದ ನಡೆದಿದ್ದು, ಈ ವೇಳೆ ತಾಳ್ಮೆ ಕಳೆದುಕೊಂಡ ಖಲಿ ಹೊಡೆದಾಟಕ್ಕೆ ನಿಂತ ಘಟನೆ ನಡೆದಿದೆ.

ಪಂಜಾಬ್‌ ನ ಲುಧಿಯಾನದಲ್ಲಿ ಟೋಲ್ ಪ್ಲಾಜಾ ಉದ್ಯೋಗಿಗಳೊಂದಿಗೆ” ಗ್ರೇಟ್ ಖಲಿ ದಲೀಪ್ ಸಿಂಗ್ ರಾಣಾ”ವಾಗ್ವಾದಕ್ಕಿಳಿದು ಸಿಬ್ಬಂದಿ ಕಾಲರ್ ಹಿಡಿದೆಳೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪಾಣಿಪತ್-ಜಲಂಧರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ದಲೀಪ್ ಸಿಂಗ್ ತಮ್ಮ ಕಾರಿನಲ್ಲಿ ಕರ್ನಾಲ್‌ ಗೆ ಪ್ರಯಾಣಿಸುತ್ತಿದ್ದರು. ಟೋಲ್ ಸಮೀಪಿಸುತ್ತಿದ್ದಂತೆ ಟೋಲ್ ಪ್ಲಾಜಾದ ಉದ್ಯೋಗಿಯೊಬ್ಬರು ಗುರುತಿನ ಚೀಟಿ
ಕೇಳಿದಕ್ಕೆ ತನ್ನನ್ನು ಥಳಿಸಿದ್ದಾರೆ ಎಂದು ನೌಕರನು ಆರೋಪಿಸಿದ್ದಾನೆ.

ಆದರೆ ಸಿಬ್ಬಂದಿ ಗುರುತಿನ ಚೀಟಿ ಕೇಳುವುದು ಮತ್ತು ಅಸಭ್ಯವಾಗಿ ವರ್ತಿಸಿದ್ದಾನೆ. ತಮ್ಮ ಬಳಿ ಗುರುತಿನ ಚೀಟಿ ಇಲ್ಲದ್ದಕ್ಕಾಗಿ ಟೋಲ್ ನೌಕರರು ಬ್ಲ್ಯಾಕ್ ಮೇಲ್ ಕೂಡ ಮಾಡಿದ್ದಾರೆ ಎಂದು ದಲೀಪ್ ಸಿಂಗ್ ಆರೋಪಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

 

ಇತ್ತೀಚಿನ ಸುದ್ದಿ

Exit mobile version