ನಡು ರಸ್ತೆಯಲ್ಲೇ ಆನೆಗಳ ಜಗಳ: ಆನೆಗಳ ಗುದ್ದಾಟ ವಿಡಿಯೋ ಮಾಡಿದ ಪ್ರವಾಸಿಗರು
12/07/2023
ಚಾಮರಾಜನಗರ ಜಿಲ್ಲೆಯ ಕರ್ನಾಟಕ-ತಮಿಳುನಾಡು ಗಡಿ ಭಾಗದ ಆಸನೂರು ಬಳಿ ಆನೆಗಳೆರಡು ಜಗಳ ಆರಂಭಿಸಿದ್ದು, ಆನೆಗಳ ಗುದ್ದಾಟವನ್ನು ವಾಹನ ಸವಾರರು ರಸ್ತೆಯಲ್ಲೇ ವಾಹನ ನಿಲ್ಲಿಸಿ ನೋಡಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಗಳ ಮುಖಾಮುಖಿಯಾಗಿವೆ ಕೆಲ ಹೊತ್ತು ಎರಡು ಆನೆಗಳ ನಡುವೆ ಗುದ್ದಾಟ ನಡೆದಿದೆ. ಕಾರಿನಲ್ಲಿ ಸಂಚರಿಸುತ್ತಿದ್ದ ಪ್ರವಾಸಿಗರು ಆನೆಗಳ ಗುದ್ದಾಟವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಆಸನೂರಿನ ಕಾರೆಪಾಳ್ಯದಲ್ಲಿ ಆನೆಗಳ ದರ್ಶನವಾಗಿದ್ದು, ಪರಸ್ಪರ ಗುದ್ದಾಡಿಕೊಂಡ ಬಳಿಕ ಎರಡೂ ಆನೆಗಳು ಸುಮ್ಮನಾಗಿವೆ. ಜಗಳವನ್ನು ವಿಕೋಪಕ್ಕೆ ಕೊಂಡೊಯ್ಯದೇ ಆನೆಗಳು ಕೊನೆಗೆ ಶಾಂತವಾಗಿದೆ.
ವಿಡಿಯೋ ನೋಡಿ:
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw


























