3:58 PM Wednesday 10 - December 2025

ಪ್ರಯಾಣಿಕರೇ… ಎಚ್ಚರ…  ಚಾರ್ಮಾಡಿ ರಸ್ತೆಯಲ್ಲಿ ಸಂಚರಿಸುವಾಗ ಹುಷಾರ್!

charmadi
06/07/2025

ಚಿಕ್ಕಮಗಳೂರು:  ಚಾರ್ಮಾಡಿ ರಸ್ತೆಯಲ್ಲಿ ಸಂಚರಿಸುವಾಗ  ಪ್ರಯಾಣಿಕರು ಎಚ್ಚರಿಕೆಯಿಂದಿರಬೇಕಿದೆ. ಯಾಕಂದ್ರೆ  ಚಾರ್ಮಾಡಿ ಘಾಟಿಯಲ್ಲಿ 5 ಅಡಿ ದೂರವೂ ಕಾಣದಂತ ಮಂಜು ಕವಿದಿದೆ.  ಹಾಗಾಗಿ ದಟ್ಟವಾದ ಮಂಜಿನಿಂದಾಗಿ ಎದುರಿನಿಂದು ಬರುತ್ತಿರುವ ವಾಹನಗಳು ಸರಿಯಾಗಿ ಕಾಣದ ಅಪಘಾತದ ಸಾಧ್ಯತೆಗಳು ಹೆಚ್ಚಾಗಿವೆ.

ಚಾರ್ಮಾಡಿಯಲ್ಲಿ ಕವಿದಿರುವ ದಟ್ಟ ಮಂಜಿನಲ್ಲಿ  ಹಗಲಲ್ಲಿ ವಾಹನ ಡ್ರೈವ್ ಮಾಡೋದೇ ಕಷ್ಟ, ರಾತ್ರಿ ವೇಳೆ ಮತ್ತಷ್ಟು ಕಷ್ಟಕರವಾಗಿದೆ.  5 ಅಡಿ ದೂರವೂ ಕಾಣದಂತಹಾ ಮಂಜು ಆವರಿಸಿದೆ.

ಹಾವು-ಬಳುಕಿನ ಮೈಕಟ್ಟಿನ ರಸ್ತೆ ಸಮಸ್ಯೆ ತಂದೊಡ್ಡಬಹುದು  ಹಾಗಾಗಿ  ಈ ರಸ್ತೆಯಲ್ಲಿ ವಾಹನ ಚಲಾಯಿಸುವ ವೇಳೆ,  ತಿರುವುಗಳಲ್ಲಿ ಹೆಡ್ ಲೈಟ್ ಜೊತೆ ಹಾರನ್ ಮಾಡ್ಕೊಂಡು ಹೋಗೋದು ಒಳ್ಳೆಯದು, ತಕ್ಷಣ ಕಂಟ್ರೋಲ್ ಮಾಡೋಕ್ ಹೋದ್ರೆ ಗಾಡಿ ಅಪಘಾತಕ್ಕೀಡಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಚಾರ್ಮಾಡಿ ರಸ್ತೆಯಲ್ಲಿ ಒಂದೆಡೆ ಗುಡ್ಡ, ಮತ್ತೊಂದೆಡೆ ಪ್ರಪಾತ ಇರೋದ್ರಿಂದ ವಾಹನ ಚಾಲಕರು ಹುಷಾರಾಗಿ ಸಂಚರಿಸಬೇಕಿದೆ. ರಾತ್ರಿ ಪ್ರಯಾಣದ ವೇಳೆ ಅತ್ಯಂತ ಜಾಗರೂಕರಾಗಿರಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version