12:09 AM Tuesday 27 - January 2026

ರಿಪಬ್ಲಿಕ್ ಟಿವಿಯ ಸಿಇಒ ವಿಕಾಸ್ ಖಾಂಚಂದಾನಿ ಅರೆಸ್ಟ್

13/12/2020

ಮುಂಬೈ: ಟಿ ಆರ್ ಪಿ ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ಸಿಇಒ ವಿಕಾಸ್ ಖಾಂಚಂದಾನಿಯನ್ನು ಬಂಧಿಸಲಾಗಿದ್ದು, ಈತನ ಬಂಧನದೊಂದಿಗೆ ಬಂಧಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ವಿಕಾಸ್ ಖಾಂಚಂದಾನಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಸೋಮವಾರ ಅರ್ಜಿಯ ವಿಚಾರಣೆ ನಡೆಯಬೇಕಿತ್ತು. ಈ ನಡುವೆ ಮುಂಬೈ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಅಕ್ಟೋಬರ್ 6ರಂದು ಮುಂಬೈ ಪೊಲೀಸರು ರೇಟಿಂಗ್ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ ಐಆರ್ ದಾಖಲಿಸಿಕೊಂಡಿದ್ದರು. ಕೇವಲ ಒಂದು ಪಕ್ಷದ ಪರವಾಗಿ ನಿಂತು ಬ್ಯಾಟಿಂಗ್ ಮಾಡುತ್ತಿದ್ದ ರಿಪಬ್ಲಿಕ್ ಟಿವಿ ರೇಟಿಂಗ್ ಕಳೆದುಕೊಂಡಿತ್ತು. ಜನರು ಟಿವಿಯನ್ನು ನೋಡುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದ್ದಂತೆಯೇ ನಕಲಿ ಟಿಆರ್ ಪಿ ಭರಿಸಲು ಚಾನೆಲ್ ಮುಂದಾಗಿತ್ತು ಎಂದು ಆರೋಪಿಸಲಾಗಿದೆ/

ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 140 ಸಾಕ್ಷಿಗಳನ್ನು ಪೊಲೀಸರು ಈವರೆಗೆ ವಿಚಾರಣೆ ನಡೆಸಿದ್ದಾರೆ.  ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿಕಾಸ್ ಖಾಂಚಂದಾನಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version