10:42 PM Tuesday 27 - January 2026

ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ನಿಷೇಧಕ್ಕೆ ಪ್ರಮುಖ ಪಾತ್ರವಹಿಸಿದ ಭಾರತದ ಗಡ್ಡೆ!

11/01/2021

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್  ಖಾತೆಗಳನ್ನು ಶಾಶ್ವತವಾಗಿ ಅಮಾನತು ಮಾಡಲು ಭಾರತದ 45 ವರ್ಷದ ಅನಿವಾಸಿ ಮಹಿಳೆ ಪ್ರಮುಖ ಪಾತ್ರವಹಿಸಿದ್ದಾರೆ.

 ಟ್ವಿಟರ್‌ನ ಉನ್ನತ ವಕೀಲೆ ವಿಜಯ ಗಡ್ಡೆ ಅವರು ಟ್ರಂಪ್ ಅವರ ಟ್ವಿಟ್ಟರ್ ಖಾತೆ ಬ್ಯಾನ್ ಮಾಡಲು ಪ್ರಮುಖ ಪಾತ್ರವಹಿಸಿದ್ದರು. ಟ್ರಂಪ್ ಸಾಮಾಜಿಕ ಜಾಲತಾಣಗಳ ಪೋಸ್ಟ್ ಮೂಲಕ ಕ್ಯಾಪಿಟಲ್ ಮೇಲಿನ ದಾಳಿಯನ್ನು ಪ್ರೋತ್ಸಾಹಿಸಿದ್ದರು ಎನ್ನುವುದು ತಿಳಿಯುತ್ತಿದ್ದಂತೆಯೇ ಅವರ ಟ್ವಿಟ್ಟರ್ ಖಾತೆಗಳನ್ನು ನಿಷೇಧಿಸಲಾಗಿದೆ.

ವಿಜಯ ಗಡ್ಡೆ ಟ್ವಿಟರ್ ನ ಕಾನೂನು, ನೀತಿ ಮತ್ತು ಟ್ರಸ್ಟ್, ಮತ್ತು ಸುಕ್ಷತೆ ವಿಚಾರಗಳ ಮುಖ್ಯಸ್ಥರಾಗಿದ್ದಾರೆ. ಮುಂದಿನ ಹಿಂಸಾಚಾರ ಅಪಾಯದ ಕಾರಣದಿಂದ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿರುವುದಾಗಿ ಅವರು ತಿಳಿಸಿದ್ದಾರೆ.

ಭಾರತದಲ್ಲಿ ಹುಟ್ಟಿದ್ದ ಗಡ್ಡೆ, ಚಿಕ್ಕಂದಿನಲ್ಲಿಯೇ ಅಮೆರಿಕಾಕ್ಕೆ ತೆರಳಿದ್ದು, ಟೆಕ್ಸಾಸ್ ನಲ್ಲಿ ಬೆಳೆದಿದ್ದಾರೆ. ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ನ್ಯೂ ಯಾರ್ಕ್ ಯೂನಿವರ್ಸಿಟಿ ಲಾ ಸ್ಕೂಲ್ ನಲ್ಲಿ ಪದವಿ ಪಡೆದಿರುವ ಗಡ್ಡೆ, 2011ರಲ್ಲಿ ಟ್ವಿಟರ್ ಕಂಪನಿಗೆ ಸೇರಿಕೊಂಡಿದ್ದರು.

 

ಇತ್ತೀಚಿನ ಸುದ್ದಿ

Exit mobile version