1:07 PM Thursday 23 - October 2025

3 ಸಾವಿರ ರೂಪಾಯಿಯ ಟಿಕೆಟನ್ನು 42,000 ರೂಪಾಯಿಗೆ ಮಾರಾಟ ಮಾಡಿದ ಟಿಟಿಡಿ ದೇಗುಲದ ಸಿಬ್ಬಂದಿ ಅಂದರ್

07/07/2023

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ವಿಐಪಿ ಟಿಕೆಟ್​ನ್ನು​​ 42,000 ರೂಪಾಯಿಗೆ ಮಾರಾಟ ಮಾಡಿರುವ ಅಲ್ಲಿನ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಟಿಟಿಡಿ ದೇಗುಲದ ಸಿಬ್ಬಂದಿಯೊಬ್ಬರು ದೇವಸ್ಥಾನದ ಪಟ್ಟಣದಲ್ಲಿ ವಿಐಪಿ ದರ್ಶನದ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟಿಂಗ್‌ನಲ್ಲಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಕೃತ್ಯವನ್ನು ದೇವಾಲಯದ ಉದ್ಯೋಗಿ ಶಂಕರ್ ಎಂಬುವವರು ಮಾಡಿದ್ದಾರೆ ಎಂದು ಗುರುತಿಸಲಾಗಿದ್ದು, ಹೈದರಾಬಾದ್‌ನ ಭಕ್ತರೊಬ್ಬರು ಆರು ಟಿಕೆಟ್‌ಗಳನ್ನು 42,000 ರೂಪಾಯಿಗೆ ಖರೀದಿಸಲಾಗಿದೆ. ಆದರೆ ನಿಜವಾದ ಟಿಕೆಟ್ ಬೆಲೆ ಕೇವಲ 3,000 ರೂಪಾಯಿಯಂತೆ.

ಟಿಟಿಡಿಯ ವಿಜಿಲೆನ್ಸ್ ಮತ್ತು ಸೆಕ್ಯುರಿಟಿ ವಿಭಾಗಕ್ಕೆ ಈ ಅಕ್ರಮದ ಬಗ್ಗೆ ಮಾಹಿತಿ ನೀಡಿದ್ದು, ಭಕ್ತರೊಬ್ಬರು ತಮ್ಮ ಕುಟುಂಬದ ಜತೆಗೆ ತಿರುಪತಿಗೆ ಬಂದಿದ್ದು, ಈ ಸಮಯದಲ್ಲಿ ವೈಕುಂಟಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿ ದರ್ಶನ ಟಿಕೆಟ್ ಕೌಂಟರ್‌ನಲ್ಲಿ ವಿರಾಮದ ಬಗ್ಗೆ ತನಿಖೆ ನಡೆಸಿದಾಗ ಶಂಕರ್ ಎಂಬ ವ್ಯಕ್ತಿ ಹೈದರಾಬಾದ್ ಮೂಲದ ಭಕ್ತರೊಬ್ಬರ ಕುಟುಂಬಕ್ಕೆ ದರ್ಶನದ ಟಿಕೆಟ್‌ಗಳನ್ನು 42,000 ರೂಪಾಯಿಗೆ ಮಾರಾಟ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಸ್ಥಳೀಯ ಎಂಎಲ್‌ಸಿಯ ಶಿಫಾರಸು ಪತ್ರವನ್ನು ದುರುಪಯೋಗಪಡಿಸಿಕೊಂಡು ಶಂಕರ್ ಟಿಕೆಟ್ ಪಡೆದಿದ್ದರು ಎಂದು ವರದಿಯಾಗಿದೆ. ನಂತರ ವಿಜಿಲೆನ್ಸ್ ವಿಭಾಗವು ತಿರುಮಲ 2 ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಟಿಟಿಡಿ ಅಧಿಕಾರಿಗಳು ಟಿಕೆಟ್ ಖರೀದಿಸಲು ಮಧ್ಯವರ್ತಿಗಳನ್ನು ಸಂಪರ್ಕಿಸದಂತೆ ಭಕ್ತರಿಗೆ ಮನವಿ ಮಾಡಿದ್ದಾರೆ. ದೇವರ ದರ್ಶನ ಪಡೆಯಲು ಪಾರದರ್ಶಕತೆಯುತ ಟಿಕೆಟ್​​ ಬೆಲೆಯನ್ನು ಬಗ್ಗೆ ಟಿಟಿಡಿ ವೆಬ್‌ಸೈಟ್​​ನಲ್ಲಿ ತಿಳಿದುಕೊಳ್ಳಬಹುದು ಮತ್ತು ಅಲ್ಲಿಯೇ ಟಿಕೆಟ್​​ ಬುಕ್​​ ಮಾಡಬಹುದು ಎಂದು ಆಡಳಿತ ಮಂಡಳಿ ಹೇಳಿಕೆ ನೀಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version