ನಿಫಾ ವೈರಸ್ ಗೆ ಇಬ್ಬರು ಮಕ್ಕಳು ಸಾವು ಹಿನ್ನೆಲೆ: ಗಡಿನಾಡಿನಲ್ಲಿ ಆರೋಗ್ಯ ಇಲಾಖೆ ಅಲರ್ಟ್

chamarajanagara
13/09/2023

ಚಾಮರಾಜನಗರ: ಕೇರಳದಲ್ಲಿ ನಿಫಾ ವೈರಸ್ ಗೆ ಇಬ್ಬರು ಮಕ್ಕಳು ಸಾವು ಹಿನ್ನೆಲೆ ಗಡಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.

ಕೇರಳ-ಕರ್ನಾಟಕ ಗಡಿಯ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದ್ದು,  ಗೂಡ್ಸ್ ವಾಹನಗಳಿಗೆ ಸ್ಯಾನಿಟೈಸ್ ಮಾಡಲು ಕ್ರಮ ವಹಿಸಲಾಗಿದೆ.

ಹಂದಿ ಸೇರಿದಂತೆ ಮಾಂಸಾಹಾರ ಪದಾರ್ಥ ಸಾಗಿಸುವ ವಾಹನಗಳ ಮೇಲೆ ನಿಗಾ ಇರಿಸಲಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನ ಕಾಡಂಚಿನಲ್ಲಿ ಇರುವ 158 ಗ್ರಾಮಗಳ ಮೇಲೆ ಆರೋಗ್ಯ ಇಲಾಖೆ ವಿಶೇಷ ನಿಗಾ ವಹಿಸಿದೆ.

ನಾಳೆಯಿಂದ ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸೋದಾಗಿ ಡಿಎಚ್ ಒ ಡಾ. ವಿಶ್ವೇಶ್ವರಯ್ಯ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version